ಬೆಂಗಳೂರು:
ಇಡೀ ಸಂಪುಟ ಮತ್ತು ಪಕ್ಷ ಮುಖ್ಯಮಂತ್ರಿಗಳ ಪರವಾಗಿ ನಿಂತಿದ್ದು, ನ್ಯಾಯಕ್ಕಾಗಿ ಹೋರಾಡಿ ಗೆಲ್ಲುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿರುವುದನ್ನು ಸಂಪುಟ ಖಂಡಿಸಿದೆ ಎಂದರು.
ಹಿಂದೆ ಸಂಪುಟದಲ್ಲಿ ನಿರ್ಣಯಿಸಿ ತೆಗೆದುಕೊಂಡಿದ್ದ ನಿರ್ಣಯ ಮತ್ತು ಕ್ಯಾಬಿನೆಟ್ ನೋಟ್‌ನಲ್ಲಿ ನಾವು ತಿಳಿಸಿದ್ದ ಕಾನೂನಾತ್ಮಕ ಸಂಗತಿಗಳನ್ನು ರಾಜ್ಯಪಾಲರು ಪರಿಗಣಿಸಿಲ್ಲ. ಬದಲಿಗೆ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೆಲವನ್ನು ಸೆಲೆಕ್ಟೀವ್ ಆಗಿ ಉಲ್ಲೇಖ ಮಾಡಿದ್ದಾರೆ. ಆದ್ದರಿಂದ ರಾಜ್ಯಪಾಲರ ಕ್ರಮ ದುರುದ್ದೇಶದಿಂದ ಕೂಡಿದೆ ಎಂದರು.
ಮುಖ್ಯಮಂತ್ರಿಗಳು ಯಾವುದೇ ಒತ್ತಡಕ್ಕೆ ಸಿಲುಕಿ ರಾಜೀನಾಮೆ ನೀಡಬೇಕಾಗಿಲ್ಲ. ಹೈಕಮಾಂಡ್‌ನಿಂದ ಹಿಡಿದು ಕಾರ್ಯಕರ್ತರ ತನಕ ಎಲ್ಲರೂ ಸಿಎಂ ಜೊತೆಗೆ ಇದ್ದೇವೆ. ಕೇಂದ್ರದ ಷಡ್ಯಂತ್ರದ ರಾಜಕಾರಣಕ್ಕೆ ನಮ್ಮ ದಿಕ್ಕಾರವಿದೆ ಎಂದರು.
ಭ್ರಷ್ಟಾಚಾರ ವಿರೋಧಿ ಕಾಯಿದೆ 17(ಎ) ಬಗ್ಗೆ ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಕ್ಕೆ ಸುತ್ತೋಲೆಯನ್ನು ಕಳುಹಿಸಿದೆ. ಅದರಲ್ಲಿ ಹೇಳಿರುವ ಅಂಶಗಳನ್ನು ರಾಜ್ಯಪಾಲರು ಪಾಲನೆ ಮಾಡಿಲ್ಲ. ಬದಲಿಗೆ ರಾಜಭವನವನ್ನು ದುರುದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಸಿದರು.