ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಪುತ್ರಿ ಪದ್ಮಾವತಿ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ.
ಮುಖ್ಯಮಂತ್ರಿ ಪುತ್ರ ವಿಜಯೇಂದ್ರಗೆ ಕರೊನಾ ನೆಗೆಟಿವ್ ವರದಿಯಾಗಿದೆ. ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಪದ್ಮಾವತಿ ಅಬರು ಸಿಎಂ ಬಿಎಸ್ವೈ ಜತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಿಎಂ ಕಚೇರಿಯಲ್ಲಿ ಸಿಬ್ಬಂದಿಗೆ ಸಾಮೂಹಿಕ ಟೆಸ್ಟ್ ಮಾಡಿಸಲಾಗಿದ್ದು, ಇಂದು ಮಧ್ಯಾಹ್ನದೊಳಗೆ ವರದಿ ಬರಲಿದೆ. ಇದರೊಂದಿಗೆ ಸಿಎಂ ಟ್ರಾವೆಲ್ ಹಿಸ್ಟರಿ ಪ್ರಕಾರ, ರಾಜ್ಯಪಾಲರ ಭೇಟಿ, ಕಸ್ತೂರಿರಂಗನ್ಗೆ ಸನ್ಮಾನ, ಸಚಿವರಾದ ಬೊಮ್ಮಾಯಿ, ಅಶ್ವಥ್ ನಾರಾಯಣ, ಸುಧಾಕರ್ ಹಾಗೂ ಸೋಮಣ್ಣ ಸೇರಿ ಹಲವು ಸಚಿವರ ಜೊತೆ ಸಭೆ ನಡೆಸಿರುವುದರಿಂದ ಎಲ್ಲರು ಇಂದು ಕರೊನಾ ಟೆಸ್ಟ್ ಒಳಗಾಗಲಿದ್ದಾರೆ.
ಇದಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅಪರ ಮುಖ್ಯ ಕಾರ್ಯ ದರ್ಶಿಗಳಿಗೂ ಇಂದು ಟೆಸ್ಟ್ ನಡೆಯಲಿದೆ.