ನ್ಯೂಸ್

ಹಿರಿಯೂರು ಪಟ್ಟಣದಲ್ಲಿ ಸಿಎಂ ಎಸ್ಕಾರ್ಟ್ ವಾಹನ ಪಲ್ಟಿ! ಸಿಪಿಐ ಸೇರಿ ಹಲವರಿಗೆ ಗಾಯ

ಚಿತ್ರದುರ್ಗ: ಹಿರಿಯೂರು ಪಟ್ಟಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾಗಿದ್ದು, ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದಾರೆ.

ಹಿರಿಯೂರು ತಾಲೂಕು ಕಚೇರಿ ಬಳಿ ಇಂದು(ಮಂಗಳವಾರ) ಈ ದುರ್ಘಟನೆ ಸಂಭವಿಸಿದೆ. ವಾಣಿವಿಲಾಸ ಡ್ಯಾಂ ವೀಕ್ಷಿಸಿ ಹಿರಿಯೂರು ಪಟ್ಟಣದ ನೆಹರು ಮೈದಾನಕ್ಕೆ ಮುಖ್ಯಮಂತ್ರಿಗಳು ತೆರಳುತ್ತಿದ್ದರು. ಈ ವೇಳೆ ಬೈಕ್​ವೊಂಡು ಅಡ್ಡ ಬಂದಿದ್ದು, ಡಿಕ್ಕಿಯಾಗುವುದನ್ನು ತಪ್ಪಿಸಲು ಎಸ್ಕಾರ್ಟ್​ ವಾಹನದ ಚಾಲಕ ಬ್ರೇಕ್​ ಹಾಕಿದ್ದು, ನಿಯಂತ್ರಣ ತಪ್ಪಿದ ಎಸ್ಕಾರ್ಟ್​ ವಾಹನ ಪಲ್ಟಿಯಾಗಿದೆ. ಈ ಅವಘಡದಲ್ಲಿ ಸಿಪಿಐ ರಮಾಕಾಂತ್ ಸೇರಿ ಪೊಲೀಸ್​ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.