ಬೆಳಗಾವಿ: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಗಾರ್ನಿಯರ್ ಹೇರ್ ಕಲರ್ ಕಂಪನಿಯಿಂದ ಗಾರ್ನಿಯರ್ ಪ್ರಚಾರದ ಕ್ಯಾಂಪೇನ್ ನಗರದ ರಾಮತೀರ್ಥ ನಗರದ ಸಮುದಾಯ ಭವನ ಆವರಣದಲ್ಲಿ ಜು.18ರಂದು ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.
ಮಹಾತ್ಮಗಾಂಧಿ ರಾಮತೀರ್ಥ ನಗರ ರಹವಾಸಿಗಳ ಸಂಘ, ಸ್ನೇಹ ಸಮಾಜಸೇವಾ ಸಂಘದ, ಸುರೇಶ ಯಾದವ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿರುವ ಕ್ಯಾಂಪೇನ್ ಉದ್ಘಾಟನೆ ಸಮಾರಂಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ ಹಾಗೂ ರಹವಾಸಿಗಳ ಸಂಘ, ಸ್ನೇಹ ಸಮಾಜಸೇವಾ ಸಂಘ, ಸುರೇಶ ಯಾದವ ಫೌಂಡೇಷನ್ ಸದಸ್ಯರು ಆಗಮಿಸುವರು. ಕ್ಯಾಂಪೇನ್ ಉಚಿತವಾಗಿದ್ದು ಸ್ತ್ರೀಯರು, ಪುರುಷರು ಸೇರಿ ಪ್ರತಿದಿನ 100 ಹೇರ್ ಕಲರ್ ಮಾಡಲಾಗುವುದು. ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ.8884432418 ಸಂಪರ್ಕಿಸಬಹುದು.