ಸೂಡಾ ಕಚೇರಿ ಪಕ್ಕದಲ್ಲಿ ನಿರ್ಮಿಸಿರುವ ಶೆಡ್ ತೆರವುಗೊಳಿಸುವಂತೆ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು. ಕೆ.ವಿ.ವಸಂತಕುಮಾರ್, ರಾಘವೇಂದ್ರ, ವಿನೋದ್ ಪೈ, ಎಸ್.ಬಿ. ಅಶೋಕ್ ಕುಮಾರ್ ಇದ್ದರು.  
ನ್ಯೂಸ್

ಅನಧಿಕೃತ ಶೆಡ್ ತೆರವುಗೊಳಿಸಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ಸೂಡಾ ಕಚೇರಿ ಪಕ್ಕದಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೆಡ್ ತೆರವುಗೊಳಿಸುವಂತೆ ಆಗ್ರಹಿಸಿ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.

ಸೂಡಾ ಕಚೇರಿ ಪಕ್ಕದ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆಗೆ ಅಡ್ಡಲಾಗಿ ಶೆಡ್ ನಿರ್ಮಿಸಲಾಗಿದೆ. ವಿನೋಬನಗರ 100 ಅಡಿ ರಸ್ತೆಯಿಂದ ಸೋಮಿನಕೊಪ್ಪ ರಸ್ತೆಗೆ ಸಂಪರ್ಕಿಸುವ ರಸ್ತೆಯನ್ನು ವಾಹನ ನಿಲುಗಡೆಗೆ ಬಳಕೆ ಮಾಡಿಕೊಳ್ಳಲಾಗಿದೆ. ವಾಹನಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆ ಒದಗಿಸುವುದಕ್ಕಾಗಿ ಶೆಡ್ ನಿರ್ಮಿಸಲಾಗಿದೆ ಎಂದು ದೂರಿದರು.
ದಶಕಗಳಿಂದ ಈ ರಸ್ತೆ ಸಾರ್ವಜನಿಕ ಬಳಕೆಗೆ ಲಭ್ಯವಿತ್ತು. ಈಗ ಹೊಸದಾಗಿ ನಿರ್ಮಿಸಿರುವ ಶೆಡ್‌ನಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಕೂಡಲೇ ತೆರವು ಮಾಡದೇ ಇದ್ದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದಶಿ ಕೆ.ವಿ.ವಸಂತಕುಮಾರ್, ಪ್ರಮುಖರಾದ ಎಸ್.ಬಿ.ಅಶೋಕ್‌ಕುಮಾರ್, ರಾಘವೇಂದ್ರ, ಪ್ರಕಾಶ, ಸುಬ್ರಹ್ಮಣ್ಯ, ಎಚ್.ಆರ್.ಕೇಶವಮೂರ್ತಿ, ವಿನೋದ್ ಪೈ ಇದ್ದರು.