ಆಲ್ದೂರು: ಸತ್ತಿಹಳ್ಳಿ ಗ್ರಾಪಂ ಮತ್ತು ಶೌರ್ಯ ವಿಪತ್ತು ನಿರ್ವಾಹಣ ಘಟಕ ಮಂಗಳವಾರ ಸತ್ತಿಹಳ್ಳಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸಿತು. ಸತ್ತಿಹಳ್ಳಿ ಗ್ರಾಪಂ ಮುಂಭಾಗದಿಂದ ಸ್ವಚ್ಛತೆ ಆರಂಭಿಸಿ ಭೂತನ ಕಾಡು ರಸ್ತೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳ ಬದಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಮದ್ಯದ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಸ್ವಚ್ಛಗೊಳಿಸಲಾಯಿತು. ಗ್ರಾಪಂ ಅಧ್ಯಕ್ಷ ಧ್ರುವಕುಮಾರ್, ಪಿಡಿಒ ಪರಶುರಾಮ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.