ಲಿಂಗಸುಗೂರು ಸಾರಿಗೆ ಘಟಕದ ಎಟಿಎಸ್ ನಾಗರಾಜಗೆ ಕರವೇ ಕಾರ್ಯಕರ್ತರು ಮನವಿ ಸಲ್ಲಿಸಿದರು. ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ ಪ್ರಮುಖರಾದ ಕುರುಮೇಶ ನಾಯಕ, ವೀರಭದ್ರ ಹುಲಿಗುಡ್ಡ, ದುರುಗೇಶ, ಸಿದ್ಧ ಚಲುವಾದಿ, ರಮೇಶ ಇತರರಿದ್ದರು. 
ನ್ಯೂಸ್

ಸ್ವಚ್ಛತೆ ಕಾಪಾಡಲು ಕ್ರಮಕೈಗೊಳ್ಳಿ

ಲಿಂಗಸುಗೂರು: ಸಾರಿಗೆ ಬಸ್ ನಿಲ್ದಾಣದಲ್ಲಿನ ಸಾರ್ವಜನಿಕ ಶೌಚಗೃಹ ಬಳಕೆಗೆ ಇರುವ ನಿಗದಿ ಹಣಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿದ್ದು, ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಾರಿಗೆ ಡಿಪೋ ಎಟಿಎಸ್ ನಾಗರಾಜಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬಸ್ ನಿಲ್ದಾಣದ ಸಾರ್ವಜನಿಕ ಶೌಚಗೃಹ ಬಳಕೆಗೆ ಪ್ರತಿ ವ್ಯಕ್ತಿಗೆ ಎರಡು ರೂ. ನಿಗದಿಪಡಿಸಿ ನಾಮಫಲಕ ಹಾಕಲಾಗಿದೆ. ಆದರೆ, ನಿರ್ವಹಣೆ ಮಾಡುವವರು 10ರೂ. ವಸೂಲಿ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು, ಅಂಗವಿಕಲರು, ವೃದ್ಧರು ಸೇರಿ ಅನೇಕ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ.

ಈ ಬಗ್ಗೆ ಪರಿಶೀಲನೆ ನಡೆಸಬೇಕು. ಶೌಚಗೃಹ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಕರವೇ ತಾಲೂಕು ಅಧ್ಯಕ್ಷ ಆಂಜನೇಯ ಭಂಡಾರಿ ಪ್ರಮುಖರಾದ ಕುರುಮೇಶ ನಾಯಕ, ವೀರಭದ್ರ ಹುಲಿಗುಡ್ಡ, ದುರುಗೇಶ, ಸಿದ್ಧ ಚಲುವಾದಿ, ರಮೇಶ ಇದ್ದರು.