ನವದೆಹಲಿ: ಸೊಂಟದ ಸುತ್ತ ತಿರುಗಿಸುವ Hula Hoop ಬಗ್ಗೆ ಎಲ್ಲರಿಗೆ ಗೊತ್ತು. ಇಲ್ಲೊಬ್ಬಳು ಮಹಿಳೆ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಎಂಟು ಬಳೆಗಳನ್ನು ಏಕಕಾಲದಲ್ಲಿ ಮೈ ಸುತ್ತ ತಿರುಗಿಸುತ್ತ ಗಿನ್ನಿಸ್ ದಾಖಲೆ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಗ್ರೇಸ್ ಗುಡ್ (Grace Good) ಎಂಬ ಮಹಿಳೆ ಸರ್ಕಸ್ ಪಟು. ಏಕಕಾಲದಲ್ಲಿ ಅತಿಹೆಚ್ಚು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಬಳೆಗಳನ್ನು ಸೊಂಟಕ್ಕೆ ಹಾಕಿ ಅತಿ ಹೆಚ್ಚು Hula Hoop ಬಳೆಗಳ ತಿರುಗಿಸುವಿಕೆಯ ಮೂಲಕ 30ರ ಗ್ರೇಸ್ ಗುಡ್ ಎರಡು ಹೊಸ ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಮೊದಲ ದಾಖಲೆಯಲ್ಲಿ ಅವರು ತಮ್ಮ ಸೊಂಟದ ಸುತ್ತ ಎಂಟು ಬೆಂಕಿಯ ಬಳೆಗಳನ್ನೂ ತಿರುಗಿಸುತ್ತಾ ಬ್ಯಾಲನ್ಸ್ ಮಾಡಿದ್ದಾರೆ. ಈ ಸಾಧನೆಯ ಜೊತೆಗೆ, "ದೈತ್ಯ ಚೆಂಡಿನ ಮೇಲೆ ನಿಂತು ಹೂಲಾ ಹೂಪ್‌ಗಳನ್ನು ಯಶಸ್ವಿಯಾಗಿ ತಿರುಗಿಸಿದರು. ಮೊದಲ ದಾಖಲೆಯಲ್ಲಿ ಅವರು ತಮ್ಮ ಸುತ್ತ ಎಂಟು ಬೆಂಕಿಯ ಬಳೆಗಳನ್ನೂ ಎರಡನೆಯದಲ್ಲಿ ಗ್ಲೋಬ್ ಮೇಲೆ ಬ್ಯಾಲನ್ಸ್ ಮಾಡುತ್ತ 28 ಬಳೆಗಳನ್ನೂ ತಿರುಗಿಸಿದ್ದಾರೆ.
ಈ ಕುರಿತಾಗಿ ಮಾತನಾಡಿದ ಗ್ರೇಸ್ ಗುಡ್, ‘ನಾನು 18ನೇ ವಯಸ್ಸಿಗೆ ಹುಲಾ ಹೂಪ್‌ನೊಂದಿಗೆ ನನ್ನ ಪಯಣವನ್ನುಶುರು ಮಾಡಿದೆ. ಅಲ್ಲಿಂದ ಮುಂದೆ ನನಗದರ ಹುಚ್ಚೇ ಹಿಡಿದು ನನ್ನ ಆಟಕ್ಕೆ ಹೆಚ್ಚು ಹೆಚ್ಚು ಬಳೆಗಳನ್ನು ಕೂಡಿಸುತ್ತ ಹೋದೆ. ಮುಂದೆ ಇದಕ್ಕೆ ಬೆಂಕಿಯಾಟ ಗಾಳಿಯಾಟಗಳೂ ಕೂಡಿದುವು. ಆನಂತರ ಸಾಧನೆ ಮಾಡಲು ಸಾಧ್ಯವಾಯ್ತು ಎಂದಿದ್ದಾರೆ.