ನ್ಯೂಸ್

ಒಟಿಟಿ ಸಿನಿಮಾಗಳದ್ದೇ ಹವಾ! ಸಿನಿಪ್ರಿಯರ ಕುತೂಹಲ ಕೆರಳಿಸಿದ, ಮೆಚ್ಚುಗೆ ಗಳಿಸಿದ ಸೂಪರ್​​ಹಿಟ್​ ಚಿತ್ರಗಳಿವು | OTT

ಮೋಹನ್​ ಶೆಟ್ಟಿ

OTT Films: ವರ್ಷದ ಮೊದಲಾರ್ಧ ಈಗಾಗಲೇ ಮುಗಿದು ದ್ವಿತೀಯಾರ್ಧಕ್ಕೆ ಲಗ್ಗೆ ಇಟ್ಟಾಗಿದೆ. ಬಾಲಿವುಡ್​, ಸ್ಯಾಂಡಲ್​ವುಡ್​, ಟಾಲಿವುಡ್​, ಕಾಲಿವುಡ್​ ಮತ್ತು ಮಾಲಿವುಡ್​ ಚಿತ್ರರಂಗದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿವೆ. 100 ಚಿತ್ರಗಳ ಪೈಕಿ ಬೆರಳೆಣಿಕೆಯಷ್ಟು ಸಿನಿಮಾಗಳು ಮಾತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆ ಕಂಡು, ಚಿತ್ರರಸಿಕರ ಗಮನ ಸೆಳೆದಿವೆ. ಆದರೆ, ಚಿತ್ರಮಂದಿರಗಳಲ್ಲಿ ಸೋಲುಂಡ ಕೆಲವು ಚಿತ್ರಗಳು ಮಾತ್ರ ಒಟಿಟಿಯಲ್ಲಿ ಛಾಪು ಮೂಡಿಸಿರುವುದು ಅಚ್ಚರಿ ಸಂಗತಿಯೇ.

ಕಳೆದ 6 ತಿಂಗಳಲ್ಲಿ ಯಾವ ಚಿತ್ರರಂಗದ ಸಿನಿಮಾಗಳು ಕೂಡ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಪ್ರಿಯರ ಗಮನ ಸೆಳೆದಿಲ್ಲ. ಜೊತೆಗೆ ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷಿಸಿದ ಆದಾಯವನ್ನೂ ಗಳಿಸಿಲ್ಲ. ಆದರೆ, ಒಟಿಟಿಯಲ್ಲಿ ಬಿಡುಗಡೆಗೊಂಡ ಹಲವು ಚಿತ್ರಗಳು ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದು, ಕಥೆ, ಜಾನರ್​ನಿಂದಲೇ ಹೆಚ್ಚು ಬಾರಿ ವೀಕ್ಷಿಸುವಂತೆ ಮಾಡಿದೆ. ಅತಿ ಹೆಚ್ಚಾಗಿ ನೈಜ ಘಟನೆ ಆಧರಿತ, ಕ್ರೈಂ, ಸಸ್ಪೆನ್ಸ್​-ಥ್ರಿಲ್ಲರ್​, ಹಾರರ್​, ಪ್ರೇಮಕಥೆ ವಿಷಯಗಳು ಚಿತ್ರಪ್ರೇಮಿಗಳ ಗಮನ ಸೆಳೆದಿವೆ. ಈ ಸಾಲಿನಲ್ಲಿ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳು ಮುಂಚೂಣಿಯಲ್ಲಿವೆ.

ಚಿತ್ರಮಂದಿರಗಳಲ್ಲಿ ನೋಡಲಾಗದ ತಮ್ಮ ನೆಚ್ಚಿನ ಸಿನಿಮಾಗಳನ್ನು ಜನರು ಈಗ ಒಟಿಟಿಯಲ್ಲಿ ವೀಕ್ಷಿಸಲು ಕಾತರದಿಂದ ಕಾಯುತ್ತಿರುತ್ತಾರೆ. ಕಳೆದ ಒಂದು ತಿಂಗಳಲ್ಲಿ ತೆರೆಕಂಡ ಹಲವು ಮಲಯಾಳಂ, ತಮಿಳು ಭಾಷೆಯ ಸಿನಿಮಾಗಳು ಸಿನಿಪ್ರಿಯರ ಮನಸು ಗೆದ್ದಿವೆ. 'ಟೂರಿಸ್ಟ್​ ಫ್ಯಾಮಿಲಿ', 'ರೆಟ್ರೋ', 'ಹಿಟ್​-3' ಸೇರಿದಂತೆ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಪ್ರಮುಖ ಚಿತ್ರಗಳ ಪೈಕಿ ಒಟಿಟಿ ಅಂಗಳದಲ್ಲಿ ಗೆದ್ದ ಚಿತ್ರಗಳು ಕಡಿಮೆಯೇ. ಅಷ್ಟಕ್ಕೂ ಯಾವೆಲ್ಲ ಸಿನಿಮಾಗಳು ಒಟಿಟಿಯಲ್ಲಿ ಚಿತ್ರ ಪ್ರೇಮಿಗಳ ಕುತೂಹಲ, ಕೌತುಕವನ್ನು ಹೆಚ್ಚಿಸಿದೆ? ಎಂಬುದರ ವಿವರ ಹೀಗಿದೆ ನೋಡಿ.

1. ರೇಖಾಚಿತ್ರಂ (ಮಲಯಾಳಂ)

ಒಟಿಟಿ: ಸೋನಿ ಲೈವ್

2. ಟೂರಿಸ್ಟ್​ ಫ್ಯಾಮಿಲಿ (ತಮಿಳು)

ಒಟಿಟಿ: ಜಿಯೋ ಹಾಟ್​ಸ್ಟಾರ್​

3. ತುಡರುಮ್​ (ಮಲಯಾಳಂ)

ಒಟಿಟಿ: ಜಿಯೋ ಹಾಟ್​ಸ್ಟಾರ್​

4. ಪಡಕ್ಕಲಂ (ಮಲಯಾಳಂ)

ಒಟಿಟಿ: ಜಿಯೋ ಹಾಟ್​ಸ್ಟಾರ್​

5. ಆಫೀಸರ್ ಆನ್​ ಡ್ಯೂಟಿ (ಮಲಯಾಳಂ)

ಒಟಿಟಿ: ನೆಟ್​ಫ್ಲಿಕ್ಸ್​

6. ವಾಜಾ: ಬಯೋಪಿಕ್​​ ಆಫ್​ ಬಿಲಿಯನ್​ ಬಾಯ್ಸ್​ (ಮಲಯಾಳಂ)

ಒಟಿಟಿ: ಜಿಯೋ ಹಾಟ್​ಸ್ಟಾರ್​

7. ಕಣ್ಣೂರ್​ ಸ್ಕ್ವಾಡ್​ (ಮಲಯಾಳಂ)

ಒಟಿಟಿ: ಜಿಯೋ ಹಾಟ್​ಸ್ಟಾರ್​

8. ನೇರು (ಮಲಯಾಳಂ)

ಒಟಿಟಿ: ಜಿಯೋ ಹಾಟ್​ಸ್ಟಾರ್​

9. ಅಡೋಲಾಸೆನ್ಸ್ (ಇಂಗ್ಲಿಷ್​)

ಒಟಿಟಿ: ನೆಟ್​ಫ್ಲಿಕ್ಸ್

10. ಮಿಯಾಳ್​ಗನ್​ (ತಮಿಳು)

ಒಟಿಟಿ: ಜಿಯೋ ಹಾಟ್​ಸ್ಟಾರ್​

11. ಕೋರ್ಟ್​: ಸ್ಟೇಟ್​ ವರ್ಸಸ್​ ಎ ನೋಬಡಿ (ತೆಲುಗು)

ಒಟಿಟಿ: ಜಿಯೋ ಹಾಟ್​ಸ್ಟಾರ್​