Cinema Ticket: ದುಬಾರಿ ಟಿಕೆಟ್ ದರದ ಹಿನ್ನಲೆ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ವೀಕ್ಷಿಸಲು ಹಿಂದೇಟು ಹಾಕುತ್ತಿದ್ದ ಚಿತ್ರಪ್ರೇಮಿಗಳಿಗೆ ಇದೀಗ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.
ಇದನ್ನೂ ಓದಿ: ನೀವು ಹೋದ ಜಾಗಕ್ಕೆ ನಾನು…! ಹೆತ್ತವರ ವಿರೋಧದ ನಡುವೆಯೇ ಮದುವೆ, ಪತಿ ಬೆನ್ನಲ್ಲೇ ಪತ್ನಿ ಸಾವು | Couple Death
ಇನ್ಮುಂದೆ ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ 200 ರೂ. ಮೀರುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಕೇವಲ ಚಿತ್ರಮಂದಿರ ಮಾತ್ರವಲ್ಲ, ಮಲ್ಟಿಪ್ಲೆಕ್ಸ್ಗಳಿಗೂ ಜಾರಿಯಾಗಲಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.
ಕೇವಲ ಕನ್ನಡ ಸಿನಿಮಾಗಳಿಗೆ ಮಾತ್ರವಲ್ಲದೇ ಇತರ ಭಾಷೆಯ ಚಿತ್ರಗಳಿಗೂ 200 ರೂ. ಟಿಕೆಟ್ ದರ ನಿಗದಿಯಾಗಲಿದೆ. ಈ ನಿಯಮ ಎಲ್ಲಾ ಚಿತ್ರರಂಗದ ಸಿನಿಮಾಗಳಿಗೂ ಅನ್ವಯಿಸಲಿದೆ. ಇತ್ತೀಚಿನ ಬೆಳವಣಿಗೆಗಳು ಹಾಗೂ ಒಂದಷ್ಟು ಬೇಡಿಕೆಗಳನ್ನು ಗಮನದಲ್ಲಿರಿಸಿ, ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿರುವುದು ಗಮನಾರ್ಹ.
ಕಳೆದ ವರ್ಷಗಳಲ್ಲಿ ಹಲವಾರು ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೇ ಮುಚ್ಚಲಾಗಿವೆ. ಸಿನಿಮಾಗಳು ರಿಲೀಸ್ ಆದರೂ ಜನರು ಥಿಯೇಟರ್ಗೆ ಬಾರದ ಕಾರಣ ಕನ್ನಡ ಚಿತ್ರರಂಗ ಕೂಡ ನಷ್ಟದಲ್ಲಿದೆ. ಇದರೊಂದಿಗೆ ಮಲ್ಟಿಪ್ಲೆಕ್ಸ್ಗಳಲ್ಲಿ ತೆರೆಕಾಣುವ ಪರಭಾಷೆಯ ಚಿತ್ರಗಳು ಟಿಕೆಟ್ ದರವನ್ನು ದಿಢೀರ್ ದುಬಾರಿಗೊಳಿಸಿ, ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತವೆ. ಈ ಹಿನ್ನಲೆ ಹಲವರು ಟಿಕೆಟ್ ದರ ಇಳಿಕೆಯಾಗಬೇಕು ಎಂದು ಬೇಡಿಕೆಯಿಟ್ಟಿದ್ದರು. ಕೊನೆಗೂ ಇದಕ್ಕೆ ಸ್ಪಂದಿಸಿರುವ ಸರ್ಕಾರ, ಆದೇಶ ಹೊರಡಿಸುವ ಮೂಲಕ ಅಧಿಕೃತಗೊಳಿಸಿದೆ.