Palestinian Christians attend the lighting of a Christmas tree outside the Church of the Nativity, traditionally believed by Christians to be the birthplace of Jesus Christ in the West Bank city of Bethlehem, Saturday, Dec. 5, 2020. (AP Photo/Majdi Mohammed) 
ನ್ಯೂಸ್

ವರ್ಚುವಲ್ ಕಾರ್ಯಕ್ರಮವಾಯಿತು ಬೆತ್ಲಹೇಮ್​ನ ಕ್ರಿಸ್​ಮಸ್​ ಟ್ರೀ ಲೈಟಿಂಗ್: ಪ್ರವಾಸೋದ್ಯಮಕ್ಕೆ ಹೊಡೆತ

shastrimath

ಬೆತ್ಲಹೇಮ್​: ಕ್ರಿಸ್​ಮಸ್ ಹಬ್ಬ ಸಮೀಪದಲ್ಲಿದ್ದರೂ ಕರೊನಾ ವೈರಸ್ ಕಾರಣ ಹಬ್ಬದ ಆಚರಣೆಗಳಲ್ಲೂ ವ್ಯತ್ಯಾಸವಿದೆ. ಈ ಸಲ ಬೆತ್ಲಹೇಮ್​ನಲ್ಲಿ ಕ್ರಿಸ್​ಮಸ್​ ಟ್ರೀ ಲೈಟಿಂಗ್ ಕಾರ್ಯಕ್ರಮದಲ್ಲಿ ಎಂದಿನಂತೆ ಸಾವಿರಾರು ಜನ ಭಾಗಿಯಾಗಿಲ್ಲ. ಬದಲಾಗಿ ಬೆರಳೆಣಿಕೆ ಜನರಷ್ಟೇ ಭಾಗಿಯಾಗಿದ್ದರು. ಶನಿವಾರ ರಾತ್ರಿ ಈ ಕಾರ್ಯಕ್ರಮ ನಡೆಯಿತು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಕ್ರಿಸ್ತನ ಜನ್ಮಸ್ಥಳವೆಂದು ಕ್ರೈಸ್ತರು ನಂಬುವ ಚರ್ಚ್​ ಆಫ್​ ದ ನೇಟಿವಿಟಿಯ ಸಮೀಪವೇ ಇರುವ ಮ್ಯಾನೇಜರ್ ಸ್ಕ್ವೇರ್​ನಲ್ಲಿ ಕ್ರಿಸ್​ಮಸ್ ಟ್ರೀ ಲೈಟಿಂಗ್ ಕಾರ್ಯಕ್ರಮ ನಡೆಯಿತು. ಪ್ಯಾಲೆಸ್ತೈನ್​ ಪ್ರಧಾನಿ ಮೊಹಮ್ಮದ್​ ಶತಯ್ಯೇಹ್​ ಮತ್ತು ಬೆತ್ಲಹೇಮ್​ ಮೇಯರ್ ಆಂಟನ್​ ಸಲ್ಮಾನ್​ ಮತ್ತು ಕೆಲವು ಅಧಿಕಾರಿಗಳಷ್ಟೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಾಮಾನ್ಯವಾಗಿ ಈ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲ್ಪಡುತ್ತದೆ. ಸಾವಿರಾರು ಪ್ರವಾಸಿಗರು, ಕ್ರೈಸ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿ ತುಂಬಿರುತ್ತಿದ್ದರು. ಸ್ಥಳೀಯ ವ್ಯಾಪಾರೋದ್ಯಮಗಳಿಗೂ ಇದು ಅನುಕೂಲವೇ ಆಗಿತ್ತು. ಆದರೆ, ಈ ಬಾರಿ ಇದೆಲ್ಲ ಮಿಸ್ಸಿಂಗ್ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್)