ನ್ಯೂಸ್

‘ಚಿತ್ರತುರಗ ನ್ಯಾಯ ಅರ್ಥಾತ್ ಕೀರ್ತಿಯ ಅವಾಂತರ’


ರಂಗಾಯಣದ ಭೂಮಿಗೀತ ರಂಗವೇದಿಕೆಯಲ್ಲಿ ಸೆ.22ರಂದು ಸಂಜೆ 6.30ಕ್ಕೆ ‘ಚಿತ್ರತುರಗ ನ್ಯಾಯ ಅರ್ಥಾತ್ ಕೀರ್ತಿಯ ಅವಾಂತರ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಅರ್ನಾಲ್ಡ್ ಬೆನೆಟ್ ಅವರ ಕೃತಿಯನ್ನು ಶ್ರೀಧರ ಹೆಗ್ಗೋಡು ಅನುವಾದಿಸಿದ್ದಾರೆ. ದಿಗ್ವಿಜಯ ಹೆಗ್ಗೋಡು ನಿರ್ದೇಶನದ ಜತೆಗೆ ವಿನ್ಯಾಸ, ಸಂಗೀತ ಜವಾಬ್ದಾರಿ ಹೊತ್ತಿದ್ದು, ಸಂಚಲನ ರಂಗ ತಂಡ ನಾಟಕವನ್ನು ಪ್ರಸ್ತುತಪಡಿಸಲಿದೆ. ಎಸ್.ಶೀಲಾ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಆತ್ಮಾನಂದ ವಾಸನ್, ಮನೋಜ್, ಎಂ.ಮಲ್ಲೇಶ್, ಎನ್.ಪರೀಕ್ಷಿತ್, ವರ್ಷಾರಾಜ್, ಗೌಪ್ರಿಯ, ಸುಶೀಮ್ ಸಂಘಸೇನ, ಡಾ. ನವೀನ್, ಡಿ.ಪಾವನ, ಎನ್.ರೋಹನ್, ಕೆ.ಸಂದೇಶ್, ಸಾಗರ್ ಎಸ್.ಗುಂಬಳ್ಳಿ, ಎಸ್.ಪ್ರವೀಣ್, ರಾಜೇಂದ್ರ, ಚಿನ್ಮಯ್ ಎಸ್.ದಿನೇಶ್ ಅಭಿನಯಿಸಿದ್ದಾರೆ.
ಕಿರಣ್ ಕುಮಾರ್ ಕಾವ, ಎಸ್.ಶ್ರೀಕಾಂತ್, ಕವಿತಾ ಮೋಹನ್, ಬಿ.ತ್ಯಾಗರಾಜು, ಎಸ್.ತುಕಾರಾಮ್, ಪ್ರವೀಣ, ಕಿಶನ್, ಸುಹಾಸ್, ಅಕ್ಷಿತ್ ತಾಂತ್ರಿಕವಾಗಿ ಸಹಕರಿಸಿದ್ದಾರೆ.