Samantha Ruth Prabhu (ಚಿತ್ರ X) 
ನ್ಯೂಸ್

ಮಾ ಇಂಟಿ ಬಂಗಾರಂ ಚಿತ್ರದ ಅಬ್ಬರದ ಬೆನ್ನಲ್ಲೇ ಸಮಂತಾ ಸೀಕ್ರೆಟ್ ಬಿಚ್ಚಿಟ್ಟರಾ ಚಿರಂಜೀವಿ..? ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ! Samantha Ruth Prabhu

ಪ್ರಮುಖ ಮುಖ್ಯಾಂಶಗಳು

  • ನಟಿ ಸಮಂತಾ ರುತ್ ಪ್ರಭು ಅವರ ಹೊಸ ಚಿತ್ರ ಮಾ ಇಂತಿ ಬಂಗಾರಂ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ
  • ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರು ಹಾಗೂ ಸಿನಿಪ್ರಿಯರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದೆ
  • ಮೆಗಾಸ್ಟಾರ್ ಚಿರಂಜೀವಿ ಖುದ್ದಾಗಿ ನಟಿ ಸಮಂತಾ ಹಾಗೂ ಚಿತ್ರತಂಡವನ್ನು ಭೇಟಿ ಮಾಡಿ ತಮ್ಮ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
Samantha Ruth Prabhu​: ಟಾಲಿವುಡ್‌ನ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಅವರ ಬಹುನಿರೀಕ್ಷಿತ ನಟನೆಯ ಹೊಸ ಚಿತ್ರ 'ಮಾ ಇಂತಿ ಬಂಗಾರಂ' ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾ ಪ್ರೇಕ್ಷಕರು ಹಾಗೂ ಸಿನಿಪ್ರಿಯರಿಂದ ವ್ಯಾಪಕ ಪ್ರಶಂಸೆ ಗಳಿಸುತ್ತಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಈ ದೊಡ್ಡ ಯಶಸ್ಸಿನ ಖುಷಿಯಲ್ಲಿರುವ ಚಿತ್ರತಂಡಕ್ಕೆ ಈಗ ಮತ್ತೊಂದು ಸರ್ಪ್ರೈಸ್ ಸಿಕ್ಕಿದ್ದು, ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಖುದ್ದಾಗಿ ನಟಿ ಸಮಂತಾ ಹಾಗೂ ಚಿತ್ರತಂಡವನ್ನು ಭೇಟಿ ಮಾಡಿ ತಮ್ಮ ಆತ್ಮೀಯ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದಾಗ್ಯೂ, ಭೇಟಿಯ ಸುಂದರ ಫೊಟೋವನ್ನು ಚಿರಂಜೀವಿ ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಚಿರಂಜೀವಿ ಹಂಚಿಕೊಂಡ ಪೋಸ್ಟ್​ನಲ್ಲೇನಿದೆ?

ಮಾ ಇಂತಿ ಬಂಗಾರಂ ಚಿತ್ರ ತುಂಬಾ ಆಸಕ್ತಿದಾಯಕವೆನಿಸಿತು. ಈ ಚಿತ್ರವು ಅವಿಭಕ್ತ ಕುಟುಂಬದ ಹಿನ್ನಲೆಯಲ್ಲಿ ಆ್ಯಕ್ಷನ್​ ಮತ್ತು ಭಾವನೆಗಳನ್ನು ಸುಂದರವಾಗಿ ಮಿಶ್ರಣ ಮಾಡಿರುವ ನಿರ್ದೇಶಕಿ ನಂದಿನಿ ರೆಡ್ಡಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಈ ಚಿತ್ರಕ್ಕೆ ಜೀವ ತುಂಬಿದ್ದರಿಂದ ತುಂಬಾ ಮನರಂಜನೆ ನೀಡುತ್ತದೆ. 
ಚಿತ್ರದಲ್ಲಿ ಸಮಂತಾ ಅವರ ನಟನೆ, ವಿಶೇಷವಾಗಿ ಸೀರೆಯಲ್ಲಿನ ಸಾಹಸ ದೃಶ್ಯಗಳು ಅತ್ಯಂತ ಆಕರ್ಷಕವಾಗಿ ಮೂಡಿಬಂದಿದ್ದು, ಪ್ರೇಕ್ಷಕರನ್ನು ಸೆಳೆಯುತ್ತಿವೆ. ಇಂದಿನ ದಿನಗಳಲ್ಲಿ ವೈವಿಧ್ಯತೆ ಮತ್ತು ಮಹಿಳೆಯರನ್ನು ಪ್ರಮುಖ ಪಾತ್ರದಲ್ಲಿ ಹೊಂದಿರುವ ಇಂತಹ ಕಥೆಗಳು ತೆಲುಗು ಚಿತ್ರರಂಗಕ್ಕೆ ಅತ್ಯಗತ್ಯವಾಗಿವೆ. ಈ ಅದ್ಭುತ ಯಶಸ್ಸಿಗೆ ಕಾರಣರಾದ ನಟಿ ಸಮಂತಾ, ನಿರ್ದೇಶಕಿ ನಂದಿನಿ ರೆಡ್ಡಿ, ರಾಜ್ ನಿಧಿಮೋರು ಮತ್ತು ಇಡೀ ಚಿತ್ರತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅದೇ ರೀತಿ, ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಸ್ವಾಗತಿಸುತ್ತಿರುವ ಸಮಂತಾ ಮತ್ತು ರಾಜ್ ಅವರಿಗೆ ನನ್ನ ವಿಶೇಷ ಶುಭಾಶಯಗಳು,ಎಂದು ಚಿರಂಜೀವಿ ಅವರು ಪ್ರಶಂಸಿಸಿದ್ದಾರೆ.

ಸಮಂತಾ 'ಪ್ರೆಗ್ನೆನ್ಸಿ' ವದಂತಿ: ನಂದಿನಿ ರೆಡ್ಡಿ ರಿಯಾಕ್ಷನ್!

ನಿರ್ದೇಶಕಿ ನಂದಿನಿ ರೆಡ್ಡಿ, ಸಮಂತಾ ಗರ್ಭಧಾರಣೆಯ ಬಗ್ಗೆ ನಡೆಯುತ್ತಿರುವ ಊಹಾಪೋಹಗಳ ಬಗ್ಗೆ ಮಾತನಾಡಿದ್ದು,  ನಮ್ಮ ಚಿತ್ರ ಮಾ ಇಂತಿ ಬಂಗಾರಂ ಯಶಸ್ವಿಯಾಗಿರುವುದರಿಂದ ಅವರ ಗರ್ಭಧಾರಣೆಯು ಒಂದು ಸುಂದರ ಸಮಯದಲ್ಲಿ ಬರುತ್ತದೆ. ಆದಾಗ್ಯೂ, ಈ ಯಶಸ್ಸಿನ ಸಭೆಗೆ ಹಾಜರಾಗುವುದು ಸಮಂತಾ ಅವರ 'ಪ್ರಜ್ಞಾಪೂರ್ವಕ ಆಯ್ಕೆ'ಯಾಗಿತ್ತು ಎಂದು ಅವರು ಹೇಳಿದ್ದಾರೆ.

ಮಾ ಇಂತಿ ಬಂಗಾರಂ ಕಥೆ ಮತ್ತು ಸಂಗ್ರಹ

ಮಾ ಇಂತಿ ಬಂಗಾರಂ ಒಂದು ಸಾಂಪ್ರದಾಯಿಕ ಕುಟುಂಬದ ಸುತ್ತ ಸುತ್ತುತ್ತದೆ. ಇದು ಸಮಾಜದಲ್ಲಿ ತನ್ನ ಗುರುತನ್ನು ಸ್ಥಾಪಿಸಲು ಹೆಣಗಾಡುತ್ತಿರುವ ಗುಪ್ತ ಭೂತಕಾಲದ ಮಹಿಳೆಯ ಕಥೆಯನ್ನು ಚಿತ್ರೀಕರಿಸುತ್ತಿದ್ದು, ತನ್ನ ಭುತಕಾಲದಿಂದ ಬೆದರಿಕೆ ಮತ್ತೆ ಕಾಣಿಸಿಕೊಂಡಾಗ ಸತ್ಯವನ್ನು ಮರೆಮಾಚುವಾಗ ತನ್ನನ್ನು ಅವಮಾನಿಸುವ ಕುಟುಂಬವನ್ನು ಅವಳು ಹೇಗೆ ರಕ್ಷಿಸುತ್ತಾಳೆ ಎಂಬುದರ ಮೇಲೆ ಈ ಕತೆಯನ್ನು ಹೆಣೆಯಲಾಗಿದೆ. 
ಮಾ ಇಂತಿ ಬಂಗಾರಂ ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಾರಾಂತ್ಯದಲ್ಲಿ ಚಿತ್ರವು ಉತ್ತಮ ಪ್ರದರ್ಶನ ನೀಡಿತು, ಆದರೆ ಸೋಮವಾರದಂದು ಕಲೆಕ್ಷನ್ ಗಮನಾರ್ಹವಾಗಿ ಕುಸಿಯಿತು. ನಾಲ್ಕನೇ ದಿನ, ಬರೋಬ್ಬರಿ 4.10 ಕೋಟಿ ರೂಗಳನ್ನು ಸಂಗ್ರಹಿಸಿತು. ಭಾನುವಾರದಂದು 10.10 ಕೋಟಿ ರೂ.ಗಳಿಂದ ಕಡಿಮೆಯಾಗಿದೆ. ಇದರ ಒಟ್ಟು ಕಲೆಕ್ಷನ್ ಈಗ 27.20 ಕೋಟಿ ರೂ.ಗಳಿಗೆ ತಲುಪಿದೆ (ಏಜೆನ್ಸೀಸ್​).