ನ್ಯೂಸ್

ಶಿಂಜೋ ಅಬೆ ಮೇಲೆ ಗುಂಡಿನ ದಾಳಿ ನಡೆಸಿದ ಹಂತಕನನ್ನು ಹೀರೋ ಎಂದು ವಿಕೃತಿ ಮೆರೆದ ಚೀನಾ

ನವದೆಹಲಿ: ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ ವ್ಯಕ್ತಿಯನ್ನು ಚೀನಾದ ಸಾಮಾಜಿಕ ಜಾಲತಾಣ ಕೊಂಡಾಡಿದ್ದು, ಆತನನ್ನು ಹೀರೋ ಎಂದು ಬಣ್ಣಿಸಿದೆ.

ಶಿಂಜೋ ಅವರ ಸಾವಿಗೆ ಸಂಭ್ರಮಾಚರಿಸುವ ಮೂಲಕ ಚೀನಾ ವಿಕೃತಿ ಮೆರೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್​ ಮಾಡುವ ಮೂಲಕ ಅವರಿಗೆ ಸರಿಯಾಗಿಯೇ ಆಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಶುಕ್ರವಾರ ಬೆಳಗ್ಗೆ ಪೂರ್ವ ಜಪಾನ್​​ನ ನಾರಾ ನಗರದಲ್ಲಿ ಚುನಾವಣಾ ಪ್ರಚಾರದ ವೇಳೆ ವ್ಯಕತಿಯೋರ್ವ ಎರಡು ಸುತ್ತಿನ ಗುಂಡು ಹಾರಿಸಿದ್ದನು. ತೀವ್ರ ಗಾಯಗೊಂಡಿದ್ದ ಶಿಂಜೋ ಅಬೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.(ಏಜೆನ್ಸೀಸ್)