ಕೋಹಿಮಾ: ಚೀನಾದ ಫಿಮೇಲ್ ಜೇಸಸ್ ಪ್ರಭಾವ ಈಗ ಈಶಾನ್ಯ ರಾಜ್ಯಗಳತ್ತ ತಲುಪಿದ್ದು, ಅಲ್ಲಿನ ಚರ್ಚ್ಗಳಲ್ಲಿ ಆತಂಕ, ಕಳವಳ ಶುರುವಾಗಿದೆ. ಚೀನಾದ ಚರ್ಚ್ ಆಫ್ ಆಲ್ಮೈಟಿ ಗಾಡ್ ಅಥವಾ ಈಸ್ಟರ್ನ್ ಲೈಟ್ನಿಂಗ್ ಕಲ್ಟ್ ಚರ್ಚ್ ಬಣದವರು ಮಹಿಳೆಯೊಬ್ಬಳ ಮೂಲಕ ಜೇಸಸ್ ಮಾತನಾಡುತ್ತಿದ್ದು, ಆಕೆ ಹೇಳಿದ್ದನ್ನು ನಾವೆಲ್ಲರೂ ಪಾಲಿಸಬೇಕು ಎಂದು ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದ ನಾಗಾಲ್ಯಾಂಡ್ ಬ್ಯಾಪಿಸ್ಟ್ ಚರ್ಚ್ ಕೌನ್ಸಿಲ್(ಎನ್ಬಿಸಿಸಿ) ಕಳವಳ ವ್ಯಕ್ತಪಡಿಸಿದೆ.
ಚೀನೀಸ್ ಫಿಮೇಲ್ ಜೇಸಸ್ ಬಣದವರು ಸದ್ದಿಲ್ಲದೇ ನಮ್ಮ ಸಮುದಾಯದೊಳಗೂ ಪ್ರವೇಶಿಸಿದ್ದು, ಹೆದರಿಸಿ ಬೆದರಿಸಿ ತಮ್ಮ ಬಣಕ್ಕೆ ಸೇರಿಸುತ್ತಿದ್ದಾರೆ. ಚರ್ಚ್ ಆಫ್ ಆಲ್ಮೈಟಿ ಗಾಡ್ ಅಥವಾ ಈಸ್ಟರ್ನ್ ಲೈಟ್ನಿಂಗ್ ಕಲ್ಟ್ ಚರ್ಚ್ ನದ್ದು ಸಂಘಟಿತ ಬಣವಾಗಿದೆ. ಫೇಸ್ಬುಕ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಮ್ಮೆಡೆಗೆ ಸೆಳೆಯುತ್ತಿದ್ದಾರೆ. ಜೇಸಸ್ ಅಥವಾ ದೇವರು ಭೂಮಿಗೆ ಮತ್ತೆ ಮಹಿಳೆಯ ರೂಪದಲ್ಲಿ ಅವತರಿಸಿದ್ದಾನೆ. ಅವರ ಹೆಸರು ಯಾಂಗ್ ಕ್ಸಿಯಾಂಗ್ವಿನ್ ಎಂದು. ಲೈಟ್ನಿಂಗ್ ಡೆಂಗ್ ಎಂದೂ ಅವರನ್ನು ಕರೆಯಲಾಗುತ್ತದೆ. ಬೈಬಲ್ ಜಾಗದಲ್ಲಿ ದ ವರ್ಡ್ ಅಪಿಯರ್ಸ್ ಇನ್ ದ ಫ್ಲೆಶ್ ಎಂಬ ಪುಸ್ತಕ ಬಂದಿದೆ ಎಂದು ಎನ್ಬಿಸಿಸಿ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: VIDEO: ಭವಾನಿಪಟ್ಟಣದಲ್ಲಿ ಕರಡಿ ದಾಳಿಗೆ ಜನ ಕಂಗಾಲು
ಅವರ ಬಣದ ಸಾಹಿತ್ಯಗಳನ್ನು ಅತ್ಯಾಧುನಿಕ ಟೆಕ್ನಾಲಜಿ ಬಳಸಿಕೊಂಡು ಆಕರ್ಷಕವಾಗಿ ಸಿದ್ಧಪಡಿಸುತ್ತಿದ್ದಾರೆ. ವಿಡಿಯೋ, ಆರ್ಟ್ ವರ್ಕ್, ಕಾಮಿಕ್ ಮುಂತಾದವುಗಳ ಮೂಲಕ ಎಲ್ಲರನ್ನೂ ತಮ್ಮತ್ತ ಸೆಳೆಯುತ್ತಿದ್ದಾರೆ. ಅಂತಹ ತಪ್ಪು ಪ್ರೊಪಗಾಂಡಕ್ಕೆ ಬಲಿಯಾಗದಂತೆ ನಮ್ಮ ಸಮಾಜದವರನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ನಿಗಾವಹಿಸಿ ಎಂದು ಎನ್ಬಿಸಿಸಿ ತನ್ನ ಅನುಯಾಯಿಗಳಿಗೆ ಸೂಚನೆ ಕೊಟ್ಟಿದೆ. (ಏಜೆನ್ಸೀಸ್)