ಬೀಜಿಂಗ್: ಚೀನಾದಲ್ಲಿ ಆಡಳಿತದಲ್ಲಿರುವ ಕಮ್ಯುನಿಷ್ಟ್ ಸರ್ಕಾರವೇ ಪ್ರತಿ ವರ್ಷ ಲಕ್ಷಾಂತರ ಜನರ ಅಂಗಾಂಗವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಚೀನಾದಲ್ಲಿ ಲಕ್ಷಾಂತರ ರಾಜಕೀಯ, ಜನಾಂಗೀಯ ಕೈದಿಗಳಿದ್ದಾರೆ. ಇವರನ್ನು ಅಜ್ಞಾತ ಸ್ಥಳದಲ್ಲಿ ಇಡಲಾಗಿದೆ. ಇವರ ಅಂಗಾಂಗಗಳನ್ನು ಅಲ್ಲಿನ ಸರ್ಕಾರವೇ ಕಳ್ಳಸಾಗಾಣಿಕೆ ಮಾಡುತ್ತಿದೆ. ಇದರಿಂದ ಪ್ರತಿವರ್ಷ ಲಕ್ಷಾಂತರ ಕೋಟಿ ರೂಪಾಯಿ ಸರ್ಕಾರಕ್ಕೆ ಬರುತ್ತಿದೆ ಎಂದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂಘನೆಯೊಂದು ಆರೋಪ ಮಾಡಿದೆ. ಆದರೆ ಇದನ್ನು ಚೀನಾ ಸರ್ಕಾರ ತಳ್ಳಿ ಹಾಕಿದೆ. ಇಂತಹ ಯಾವುದೇ ಜಾಲ ದೇಶದಲ್ಲಿ ಇಲ್ಲ ಎಂದಿದೆ. ಚೀನಾದಲ್ಲಿ ಎರಡು ವರ್ಷ ವಾಸವಿದ್ದ ಮಾನವಹಕ್ಕು ಸಂಘಟನೆಗಳ ಕಾರ್ಯಕರ್ತರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಉಲ್ಲೇಖಿಸಿ ಈ ಆರೋಪ ಮಾಡಿದ್ದಾರೆ.