ನ್ಯೂಸ್

ಪುಟ್ಟ ಪೋರನನ್ನು ಅನುಕರಿಸಿದ ಟೈಗರ್​​; ಎಷ್ಟು ಚೆಂದದ ಸಾಮರಸ್ಯ ಎಂದ ನೆಟ್ಟಿಗರು

ಬೀಜಿಂಗ್​​​: ಹುಲಿಯೆಂದರೆ ಯಾರಿಗೆ ಭಯವಿರುವುದಿಲ್ಲ ಹೇಳಿ. ಮೃಗಾಲಯದಲ್ಲಿ ಬೋನಿನೊಳಗಿರುವ ಹುಲಿ ಅಥವಾ ಸಿಂಹವನ್ನು ಹತ್ತಿರದಿಂದ ನೋಡಲು ಪ್ರಾಣವೇ ಕೈಗೆ ಬಂದಂತಾಗುತ್ತದೆ. ಆದರೆ ಮಗುವೊಂದ ತನ್ನಂತೆ ಹುಲಿಯನ್ನು ಕುಣಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಜನರು ಈ ದೃಶ್ಯವನ್ನು ಮೂಕವಿಸ್ಮಿತರಂತೆ ನೋಡುತ್ತಿದ್ದಾರೆ.

ವೈರಲ್​ ವಿಡಿಯೋದಲ್ಲಿ ಮಗುವೊಂದು ಹುಲಿಯ ಹತ್ತಿರ ಬರುತ್ತಿದೆ. ಹುಲಿ ಇರುವ ಬೋನಿನಲ್ಲಿ ವೀಕ್ಷಣೆಗೆಂದು ಅಳವಡಿಸಿರುವ ಗ್ಲಾಸ್​ವಾಲ್​​ ಪಕ್ಕ ನಿಂತಿದ್ದಾನೆ. ಅವನ ಬೆನ್ನು ಹುಲಿಯ ಕಡೆಗಿದೆ, ಇದನ್ನು ನೋಡಿದರೆ ಬಹುಶಃ ಅವರು ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ತೋರುತ್ತದೆ. ಹುಲಿಯೂ ಹಿಂದಿನಿಂದ ಕನ್ನಡಿಯ ಮೇಲೆ ಮುಖ ಮಾಡಿ ಮಗುವಿನ ಬೆನ್ನು ತಟ್ಟಲು ಬಯಸುತ್ತದೆ. ಸ್ವಲ್ಪ ಸಮಯದ ನಂತರ ಪುಟ್ಟ ಹುಡುಗ ಹುಲಿಯ ಕಡೆಗೆ ತಿರುಗುತ್ತಾನೆ. ತನ್ನ ಕೈಯನ್ನು ಬಲವಾಗಿ ಗಾಜಿನ ಮೇಲೆ ಬಡಿಯುತ್ತಾನೆ. ಅತ್ತಿಂದಿತ್ತ ಓಡಾಡಿದ ಹುಲಿ ಬಳಿಕ ಆ ಪುಟ್ಟ ಬಾಲಕನನ್ನು ಅನುಕರಣೆ ಮಾಡುತ್ತಾ ಕೈಯನ್ನು ಗಾಜಿಗೆ ಹೊಡೆಯುವ ರೀತಿಯಲ್ಲಿಯೇ ಹುಲಿ ಕೂಡ ಪ್ರತಿಕ್ರಿಯಿಸುವುದನ್ನು ಕಾಣಬಹುದಾಗಿದೆ.

ಇಬ್ಬರನ್ನೂ ನೋಡಿದಾಗ ಇಬ್ಬರು ಹಳೆಯ ಗೆಳೆಯರು ಬಹಳ ದಿನಗಳ ನಂತರ ಭೇಟಿಯಾದಂತೆ ಅನಿಸುತ್ತದೆ. ಈ ವೀಡಿಯೋ ಚೀನಾದ ಮೃಗಾಲಯದ್ದು ಎಂದು ಹೇಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದುವರೆಗೂ 13 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅದಕ್ಕೂ ಹೆಚ್ಚಿನ ಮಂದಿ ಪ್ರತಿಕ್ರಿಯಿಸಿದ್ದಾರೆ.

ಮಗು ಮತ್ತು ಹುಲಿಯ ಮುಗ್ಧತೆಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಓಹ್, ಮಗು ಟೈಗರ್ ಜತೆ ಆಟವಾಡೋಣ ಎಂದು ಯೋಚಿಸಿದೆ, ಆಗ ಹುಲಿಯೂ ಮಗುವಿನೊಂದಿಗೆ ಆಟವಾಡಲು ಯೋಚಿಸಿರಬೇಕು. ಮೃಗಾಲಯದಲ್ಲಿ ಇದಕ್ಕಿಂತ ಉತ್ತಮ ಸ್ನೇಹ ಇರಬಹುದೇ?. ಹುಲಿಯ ಕಿವಿಗಳನ್ನು ಹಿಂದಕ್ಕೆ ಎಳೆಯಲಾಗಿದೆ. ಹುಲಿ ಬೋನಿನಲ್ಲಿ ಇರದಿದ್ದರೆ ಮಗು ಅದಕ್ಎಕ ಬಲಿಪಶುವಾಗುತ್ತಿತ್ತು. ಈ ವಿಡಿಯೋ ಎಷ್ಟು ಮುದ್ದಾಗಿದೆ, ಪ್ರಾಣಿಗಳನ್ನು ಗೌರವಿಸಲು ಮಗುವಿಗೆ ಕಲಿಸುವುದು ಉತ್ತಮ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜೆನ್ಸೀಸ್​​)