ಬೀಜಿಂಗ್: ಚೀನಾದಲ್ಲಿ ಕೊರೊನಾ ವೈರಸ್ ಪೆಡಂಭೂತದಂತೆ ಕಾಡುತ್ತಿದೆ. ಇದುವರೆಗೆ ಈ ಮಾರಣಾಂತಿಕ ವೈರಸ್ಗೆ 26 ಮಂದಿ ಬಲಿಯಾಗಿದ್ದಾರೆ. ಸುಮಾರು 830 ಜನರಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ.
ಕೊರನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಚೀನಾ ಒಟ್ಟು 13 ನಗರಗಳನ್ನು ಬಂದ್ ಮಾಡಿದೆ.
ಚೀನಾದ ಮಹಾಗೋಡೆಯ ಸುತ್ತಮುತ್ತ ಕೆಲವು ನಗರಗಳು ಸೇರಿ ಬೀಜಿಂಗ್ನ ಪ್ರಮುಖ ಪ್ರದೇಶಗಳನ್ನು ಬಂದ್ ಮಾಡಲಾಗಿದೆ.ಈ ಪ್ರದೇಶಗಳಿಂದ ಜನರು, ವಾಹನಗಳು ಹೊರಗೆ ಹೋಗುವುದನ್ನು ಮತ್ತು ಇಲ್ಲಿಗೆ ಪ್ರವೇಶ ಮಾಡುವುದನ್ನು ನಿರ್ಭಂದಿಸಿರುವುದಾಗಿ ಸರ್ಕಾರ ಘೋಷಿಸಿದೆ.
ಪ್ರವಾಸಿಸ್ಥಳಗಳಾದ ಮಿಂಗ್ ಗೋರಿಗಳು ಮತ್ತು ಯಿನ್ಶಾನ್ ಪಾಗೋಡಾಗಳನ್ನು ನಾಳೆಯಿಂದ (ಶನಿವಾರ) ಬಂದ್ ಮಾಡಲಾಗುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಬೀಜಿಂಗ್ನಲ್ಲಿರುವ ಬರ್ಡ್ಸ್ ನೆಸ್ಟ್ ಸ್ಟೇಡಿಯಂ ಪ್ರವೇಶವನ್ನು ಈಗಾಗಲೇ ನಿರ್ಬಂಧಿಸಲಾಗಿದೆ.
ಒಟ್ಟು 13 ನಗರಗಳಲ್ಲಿ ಸುಮಾರು 41 ಮಿಲಿಯನ್ ಜನರ ಸಂಚಾರವನ್ನು ಚೀನಾ ಸರ್ಕಾರ ನಿರ್ಬಂಧಿಸಿದೆ.
2002-2003ರಲ್ಲಿ ಚೀನಾ ಮತ್ತು ಹಾಂಗ್ಕಾಂಗ್ಗೆ ಒಕ್ಕರಿಸಿದ್ದ ಸಾರ್ಸ್ ವೈರಸ್ ಬರೋಬ್ಬರಿ 650 ಮಂದಿಯನ್ನು ಬಲಿಪಡೆದಿತ್ತು. (ಏಜೆನ್ಸೀಸ್)