ನ್ಯೂಸ್

ಏನಾಗ್ತಿದೆ ಉತ್ತರ ಕೊರಿಯಾದಲ್ಲಿ? ಸರ್ವಾಧಿಕಾರಿ ಎಲ್ಲಿ?; ನೆರೆರಾಷ್ಟ್ರಕ್ಕೆ ತಜ್ಞ ವೈದ್ಯರನ್ನೊಳಗೊಂಡ ತಂಡವನ್ನು ಕಳಿಸಿಕೊಟ್ಟ ಚೀನಾ

ಸಿಯೋಲ್​: ಉತ್ತರ ಕೊರಿಯಾ ಸರ್ವಾಧಿಕಾರಿಯ ಆರೋಗ್ಯ ತೀರ ಹದಗೆಟ್ಟಿದೆ ಎಂದು ಹೇಳಲಾಗುತ್ತಿದ್ದರೂ, ಏನಾಗಿದೆ? ಅವರೆಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ.

ಕಿಮ್ ಜಾಂಗ್​ ಉನ್​ ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಆಗಿದೆ. ಅದಾದ ಬಳಿಕ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳುತ್ತಿದ್ದಾರೆ.
ಈಗ ಸರ್ವಾಧಿಕಾರಿಯ ಆರೋಗ್ಯದ ಬಗ್ಗೆ ವಿಚಾರಣೆ ಮಾಡಲು, ಅಲ್ಲಿನ ಪರಿಸ್ಥಿತಿ ಏನಾಗಿದೆ ಎಂದು ನೋಡುವ ಸಲುವಾಗಿ ಚೀನಾ ವೈದ್ಯಕೀಯ ತಜ್ಞರನ್ನೊಳಗೊಂಡ ತಂಡವೊಂದನ್ನು ಉತ್ತರ ಕೊರಿಯಾಕ್ಕೆ ಕಳಿಸಿಕೊಟ್ಟಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬೀಜಿಂಗ್​​ನಿಂದ ಉತ್ತರ ಕೊರಿಯಾಕ್ಕೆ ಗುರುವಾರ ತೆರಳಿದ ಉನ್ನತ ಮಟ್ಟದ ನಿಯೋಗದಲ್ಲಿ ಕಮ್ಯುನಿಸ್ಟ್ ಪಕ್ಷದ ಅಂತಾರಾಷ್ಟ್ರೀಯ ಸಂಪರ್ಕ ಇಲಾಖೆಯ ಸದಸ್ಯರು, ತಜ್ಞ ವೈದ್ಯರು ಇದ್ದಾರೆ. ಇವರು ಸರ್ವಾಧಿಕಾರಿ ಕಿಮ್ ಜಾಂಗ್​ ಉನ್​ ಅವರ ಆರೋಗ್ಯ ಪರಿಸ್ಥಿತಿ ನೋಡಿ, ಏನಾದರೂ ನೆರವು ಅಗತ್ಯವಿದ್ದರೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಆದರೆ ಚೀನಾ ಸರ್ಕಾರವಾಗಲಿ, ಅಂತಾರಾಷ್ಟ್ರೀಯ ಸಂಪರ್ಕ ಇಲಾಖೆಯಾಗಲೀ ಯಾವುದೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)