ನ್ಯೂಸ್

ಪಾಕಿಸ್ತಾನಕ್ಕೆ ಚೀನಾದ 50 ಸಶಸ್ತ್ರ ಡ್ರೋನ್

ನವದೆಹಲಿ: ಚೀನಾ 50 ಸಶಸ್ತ್ರ ಡ್ರೋನ್​ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲಿದ್ದು, ಇದು ಭಾರತಕ್ಕೆ ಸವಾಲಾಗಲಿದೆ ಎಂದು ಚೀನಿ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನಕ್ಕೆ 50 ವಿಂಗ್ ಲೂಂಗ್-2 ಸಶಸ್ತ್ರ ಡ್ರೋನ್​ಗಳನ್ನು ಪೂರೈಸಲು ಪಿಎಲ್​ಎ ನಿರ್ಧರಿಸಿದೆ. ಈ ಡ್ರೋನ್​ಗಳು ತುಂಬಾ ಪರಿಣಾಮಕಾರಿಯಾಗಿದ್ದು ಭಾರತಕ್ಕೆ ದುಃಸ್ವಪ್ನವಾಗಲಿದೆ ಎಂದು ಮಾಧ್ಯಮಗಳು ಅಭಿಪ್ರಾಯಪಟ್ಟಿವೆ. ಅತ್ಯಾಧುನಿಕ ಡ್ರೋನ್​ಗಳಿಗೆ ಸರಿಸಾಟಿಯಾದ ಅಸ್ತ್ರಗಳು ಭಾರತದ ಮಿಲಿಟರಿ ಬಳಿ ಇಲ್ಲದಿರುವುದರಿಂದ ಎತ್ತರದ ಪ್ರದೇಶಗಳಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು ಎಂದು ಹೇಳುವ ಮೂಲಕ ಭಾರತದ ಮೇಲೆ ಮಾನಸಿಕ ಒತ್ತಡ ಹೇರುವುದು ಚೀನಾದ ತಂತ್ರವಾಗಿದೆ.

ಭಾರತದ ತಿರುಗೇಟು: ಚೀನಾದ ಈ ತಂತ್ರಕ್ಕೆ ತಿರುಗೇಟು ನೀಡಿರುವ ಭಾರತ, ಪಾಕ್​ಗೆ ಪೂರೈಸಲಾಗುತ್ತಿರುವ ಈ ಡ್ರೋನ್​ಗಳು ಯಾವ ಲೆಕ್ಕಕ್ಕೂ ಇಲ್ಲ. ಪ್ರತಿಸ್ಪರ್ಧಿಗಳು ಇಲ್ಲದ ವಾಯು ಪ್ರದೇಶದಲ್ಲಿ ಇವು ಪಾರಮ್ಯ ಹೊಂದಿರಬಹುದು. ಆದರೆ, ಭಾರತದ ವಿಷಯದಲ್ಲಿ ಅಲ್ಲ ಎಂದು ಭಾರತೀಯ ಮಿಲಿಟರಿ ಅಧಿಕಾರಿಗಳು ಹೇಳಿದ್ದಾರೆ.

ನೇಪಾಳಕ್ಕೆ ಚೀನಾ ತಂಡ: ನೇಪಾಳ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿರುವ ಹಿನ್ನೆಲೆಯಲ್ಲಿ ಬಿಕ್ಕಟ್ಟು ಶಮನಗೊಳಿಸುವ ಕೊನೆಯ ಪ್ರಯತ್ನವಾಗಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ನಾಲ್ವರ ತಂಡವನ್ನು ನೇಪಾಳಕ್ಕೆ ಕಳುಹಿಸಲಿದ್ದಾರೆ.