ಚೀನಾ/ಹಾಂಕಾಂಗ್: ಕರೊನಾ ರೋಗದ ತೀವ್ರತೆ ಹೆಚ್ಚಾಗುತ್ತಿದ್ದು, ಸೋಂಕಿಗೆ ಒಳಗಾದವರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಇದೇ ಮೊದಲ ಬಾರಿಗೆ ಅಧಿಕೃತ ಮಾಹಿತಿಯನ್ನು ಇದೇ ಶಾಂಘೈನಲ್ಲಿ ಕೋವಿಡ್-19 ತಜ್ಞರ ಚಿಕಿತ್ಸಾ ತಂಡ ಅಧಿಕೃತಪಡಿಸಿದೆ.
ಜನರು ಹೆಚ್ಚಿನ ಸಂಖ್ಯೆಯಲ್ಲಿ ಜ್ವರ, ಆಯಾಸ, ಒಣ ಕೆಮ್ಮು, ಗಂಟಲು ನೋವು ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಆದರೆ ಶುದ್ಧ ಆಮ್ಲಜನಕದ ಕಾರಣದಿಂದ ಸೋಂಕು ಪೀಡಿತರಲ್ಲಿ ಉಸಿರಾಟ ತೊಂದರೆಗೆ ಒಳಗಾದವರ ಪ್ರಮಾಣ ಕಡಿಮೆಯಿದೆ ಎಂದು ವರದಿಯಾಗಿದೆ.
ಚೀನಾದಲ್ಲಿ ಕರೊನಾ ಸೋಂಕಿಗೆ ಒಳಗಾದವರಲ್ಲಿ ಸಾಮಾನ್ಯ ರೋಗ ಲಕ್ಷಣಗಳು ಕಂಡು ಬಂದವರಿಗೆ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ. ಗಂಭಿರವಾಗಿ ಸೋಂಕಿಗೆ ತುತ್ತಾಗಿದ್ದವರನ್ನು ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತೀಚೆಗಷ್ಟೇ ಚೀನಾದಲ್ಲಿ ಕರೊನಾ ಸೋಂಕಿನ ಸದ್ಯದ ಸ್ಥಿತಿಗತಿಯ ನೈಜ ವರದಿಯನ್ನು ತಿಳಿದುಕೊಳ್ಳಲು ವಿಶ್ವಸಂಸ್ಥೆ ಮುಂದಾಗಿತ್ತು. ಚೀನಾದ ತಜ್ಞ ವೈದ್ಯರೊಂದಿಗೆ ಮಾತುಕತೆ ನಡೆಸಿ, ಕರೊನಾ ತೀವ್ರತೆಯ ವಸ್ತುನಿಷ್ಟ ವರದಿಯನ್ನು ಕೇಳಿದ್ದರು. (ಏಜೆನ್ಸೀಸ್)