ನವದೆಹಲಿ: ಕರೊನಾ ವೈರಸ್ ಕೋವಿಡ್ 19 ನಿಂದಾಗಿ ಜಗತ್ತು ತಲ್ಲಣಗೊಂಡಿರುವಾಗಲೇ ಪಾಕಿಸ್ತಾನದಲ್ಲಿ ಚೀನಾ ಅಪಾಯಕಾರಿ ಸಿಸಿಎಚ್ಎಫ್ ಥೈರಸ್ ಮೇಲೆ ಪ್ರಯೋಗ ನಡೆಸುತ್ತಿರುವ ವಿಚಾರ ಬಹಿರಂಗವಾಗಿದೆ. ಸಿಸಿಎಚ್ಎಫ್ ವೈರಸ್ (Crimean-Congo Hemorrhagic Fever Virus) ಎಂಬುದು ತ್ವರಿತವಾಗಿ ಗಂಭೀರ ಸ್ವರೂಪದ ಜ್ವರವನ್ನು ಉಂಟುಮಾಡುವುದಲ್ಲದೆ, ಶೇಕಡ 25 ಮರಣ ಪ್ರಮಾಣ ಖಾತರಿ. ಇದು ಎಬೋಲಾ ವೈರಸ್ ಮಾದರಿಯದ್ದೇ ಇನ್ನೊಂದು ವೈರಸ್.
ಚೀನಾದ ವಿವಾದಿತ ವುಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯು ಪಾಕಿಸ್ತಾನದ ಮಿಲಿಟರಿಯ ಡಿಫೆನ್ಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಆರ್ಗನೈಸೇಷನ್(ಡಿಇಎಸ್ಟಿಒ) ಜತೆಗೆ “Collaboration for Emerging Infectious Diseases and Studies on Biological Control of Vector Transmitting Diseases” ಎಂಬ ಅಧ್ಯಯನಕ್ಕೆ ಒಪ್ಪಂದ ಮಾಡಿಕೊಂಡಿದೆ. ಅಲ್ಲಿಯೇ ಈ ಸಿಸಿಎಚ್ಎಫ್ ವೈರಸ್ ನ ಪ್ರಯೋಗವೂ ನಡೆದಿದೆ. ಆದರೆ, ಈ ಸಂಶೋಧನಾಲಯಗಳು ಜೈವಿಕ-ಸುರಕ್ಷತೆಯ ನಾಲ್ಕನೇ ಸ್ತರದ ರೋಗಗಳ ಅಧ್ಯಯನಕ್ಕೆ ಸೂಕ್ತ ಮೂಲಸೌಕರ್ಯ ಹೊಂದಿಲ್ಲ ಎಂಬ ಅಂಶವನ್ನು ದ ಕ್ಲಕ್ಸೋನ್ ವರದಿ ಉಲ್ಲೇಖಿಸಿದೆ.
ಗುಪ್ತಚರ ಮೂಲಗಳ ಮಾಹಿತಿ ಉಲ್ಲೇಖಿಸಿರುವ ಕ್ಲಕ್ಸೋನ್ ವರದಿ, ಈ ರಹಸ್ಯ ಪ್ರಾಜೆಕ್ಟ್ನಲ್ಲಿ ಈಗಾಗಲೇ ಚೀನಾ-ಪಾಕಿಸ್ತಾನಗಳು ಮಣ್ಣಿನ ಮಾದರಿ ಪರೀಕ್ಷೆ ಯಶಸ್ವಿಯಾಗಿ ನಡೆಸಿದ್ದು, Bacillus Thuringiensis (BT) ಅನ್ನು ಐಸೋಲೇಟ್ ಮಾಡಿ ಅಲ್ಲಿ Bacillus Anthracis (BA) ಅಥವಾ ಆಂಥ್ರಾಕ್ಸ್ ಸೇರಿಸುವಲ್ಲಿ ಫಲ ಕಂಡಿವೆ. ಈ ಮೂಲಕ ಬಿಟಿ ಅಥವಾ ಬಿಎ ಯನ್ನು ಬಯೋ ವಾರ್ಫೇರ್ ಆಗಿ ಬಳಸುವುದಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡಿವೆ.
ಈ ಪ್ರಯೋಗ ಸ್ಥಳ ಅಥವಾ ಪ್ರಯೋಗದ ಫಲಿತಾಂಶಗಳು ಪಾಕಿಸ್ತಾನದ ನಾಗರಿಕ ಜಗತ್ತಿಗೆ ಲಭ್ಯವಿಲ್ಲ. ಅಷ್ಟೇ ಅಲ್ಲ, ಸರ್ಕಾರದ ಆರೋಗ್ಯ ಇಲಾಖೆ ಅಥವಾ ಇನ್ಯಾವುದೇ ಇಲಾಖೆಗೂ ಲಭ್ಯವಿಲ್ಲ. ಆ ಮಟ್ಟಿಗೆ ರಹಸ್ಯವನ್ನು ಪಾಕ್ ಸೇನೆ ಮತ್ತು ಚೀನಾ ಕಾಯ್ದುಕೊಂಡಿವೆ ಎಂದು ದ ಕ್ಲಕ್ಸೋನ್ ವರದಿ ಹೇಳಿದೆ. (ಏಜೆನ್ಸೀಸ್)