ನವದೆಹಲಿ: ಕರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಎಲ್ಲೋ ಒಂದೆಡೆ ರೋಗಿಗಳು ಗುಣಮುಖರಾಗುತ್ತಿರುವ ಪ್ರಸಂಗಗಳು ಆಶಾದಾಯಕ ಬೆಳವಣಿಗೆ ಎನಿಸುತ್ತಿದ್ದರೂ ಅದರ ದುಪ್ಪಟ್ಟು ಪ್ರಮಾಣದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ನಿರ್ನಾಮ ಮಾಡುವ ಉದ್ದೇಶದಿಂದ ಭಾರತಕ್ಕೆ ಚೀನಾದಿಂದ ವೈದ್ಯಕಿಯ ಕಿಟ್ಗಳು ಆಮದಾಗುತ್ತಿವೆ.
ಮೂಲಗಳ ಪ್ರಕಾರ ಸದ್ಯಕ್ಕೆ ಈ ಮಹಾಮಾರಿ ಕರೊನಾ ಹತ್ತಿಕ್ಕುವ ನಿಟ್ಟಿನಲ್ಲಿ ಚೀನಾದಿಂದ 6.5 ಲಕ್ಷ ವೈದ್ಯಕಿಯ ಕಿಟ್ಗಳು ಭಾರತಕ್ಕೆ ಆಮದಾಗುತ್ತಿವೆ. ಚೀನಾದಿಂದ ಬುಧವಾರ ತಡರಾತ್ರಿ ವೈಯಕ್ತಿಕ ರಕ್ಷಣಾ ಸಾಮಗ್ರಿ (ಪಿಪಿಇ) ಕಿಟ್ಗಳು ಆಸ್ಸಾಂಗೆ ಪೂರೈಕೆಯಾಗಿವೆ.
ಮೂಲಗಳ ಪ್ರಕಾರ ಸೋಂಕು ಹರಡುವಿಕೆಯನ್ನು ತಡೆಗಟ್ಟಲು 5.5 ಲಕ್ಷ ಪ್ರತಿಕಾಯ ಪರೀಕ್ಷಾ ಕಿಟ್ ಹಾಗೂ 1 ಲಕ್ಷ ಆರ್ಎನ್ಎ ಹೊರತೆಗೆಯುವ ಕಿಟ್ಗಳು ಭಾರತಕ್ಕೆ ಗುರುವಾರ ಆಗಮಿಸಲಿವೆ.
ವೈದ್ಯಕಿಯ ಉಪಕರಣಗಳನ್ನು ಭಾರತಕ್ಕೆ ಕಳುಹಿಸುವಲ್ಲಿ ಬೀಜಿಂಗ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಮುಖ ಪಾತ್ರ ವಹಿಸಿದೆ. 3 ಲಕ್ಷ ಪ್ರತಿಕಾಯ ಪರೀಕ್ಷಾ ಕಿಟ್ಗಳು ಗುವಾಂಗ್ಜೌ ವೊಂಡ್ಪೊದಿಂದ, 2.5 ಲಕ್ಷ ಕಿಟ್ಗಳು ಝುಹೈ ಲಿವ್ಜಾನ್ನಿಂದ ಹಾಗೂ 1 ಲಕ್ಷ ಆರ್ಎನ್ಎ ಹೊರತೆಗೆಯುವ ಕಿಟ್ಗಳನ್ನು ಎಂಜಿಐ ಶೇನ್ಜೆನ್ನಿಂದ ಬುಧವಾರ ತಡರಾತ್ರಿ ಕಳುಹಿಸಲಾಗಿದ್ದು, ಈ ಎಲ್ಲ ಕಿಟ್ಗಳು ಗುರುವಾರ ಭಾರತಕ್ಕೆ ಬರಲಿವೆ ಎಂದು ಅಲ್ಲಿನ ಪ್ರತ್ಯಕ್ಷದಶಿರ್ಗಳು ಮಾಹಿತಿ ಒದಗಿಸಿದ್ದಾರೆ.
ಚೀನಾದ ಭಾರತದ ರಾಯಭಾರಿ ವಿಕ್ರಮ್ ಮಿಸ್ರಿ ಕಳೆದ ಮಂಗಳವಾರ ವರದಿಗಾರರೊಂದಿಗೆ ಮಾತನಾಡಿ, "ಕೋವಿಡ್ &19 ಗೆ ಸಂಬಂಧಿಸಿದಂತೆ ಭಾರತಕ್ಕೆ ಗುಣಮಟ್ಟದ ವೈದ್ಯಕಿಯ ಸಾಮಗ್ರಿಗಳ ಪೂರೈಕೆಯನ್ನು ಸುಗಮಗೊಳಿಸುವುದು ಹಾಗೂ ಔಷಧಿ ಉತ್ಪಾದನೆ ಪೂರೈಕೆಯ ಸರಪಳಿಯನ್ನು ಮುಕ್ತವಾಗಿಡುವುದು ದ್ವಿಪಯ ಸಂಬಂಧಗಳಿಗೆ ಚೀನಾದ ಉತ್ತಮ ಸಂಕೇತವಾಗಿದೆ' ಎಂದು ತಿಳಿಸಿದ್ದರು.
ಅಂದಾಜು 15 ದಶಲಕ್ಷ ಪಿಪಿಇ ಕಿಟ್ಗಳ (ನಿಲುವಂಗಿ, ಮಾಸ್ಕ್ಗಳು, ಕೈಗವಸುಗಳು, ಕನ್ನಡಕಗಳನ್ನೊಳಗೊಂಡ ) ಪೂರೈಕೆಗಾಗಿ ಚೀನಾದ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಕೋವಿಡ್&19 ನಿಯಂತ್ರಣಕ್ಕೆ 1.5 ದಶಲಕ್ಷ ಪ್ರ ಪರೀಕ್ಷಾ ಕಿಟ್ಗಳಿಗೆ ಭಾರತ ಸರ್ಕಾರ ಮತ್ತು ಖಾಸಗಿ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ ಎಂದು ಅವರು ತಿಳಿಸಿದ್ದರು.
ವೆಂಟಿಲೇಟರ್, ರಕ್ಷಣಾತ್ಮಕ ಉಡುಪು, ಚೀನಾ ಕಂಪನಿಗಳಿಂದ ಪರೀಕ್ಷಾ ಕಿಟ್ಗಳಂತಹ ಗುಣಮಟ್ಟದ ವೈದ್ಯಕಿಯ ಉಪಕರಣಗಳನ್ನು ಶ್ರೀ ರ್ತುಗೊಳಿಸುವಂತೆ ಭಾರತ ಮನವಿ ಮಾಡಿಕೊಂಡಿದೆ ಎಂದು ಅವರು ತಿಳಿಸಿದ್ದರು. (ಏಜೆನ್ಸೀಸ್)