ಮಕ್ಕಳ ರಂಗ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮೊಕ್ತೇಸರ ರಾಜೇಂದ್ರ ಚಿಲಿಂಬಿ ಉಪಸ್ಥಿತರಿದ್ದರು. 
ನ್ಯೂಸ್

ರಂಗಭೂಮಿಯಿಂದ ಮಕ್ಕಳ ವ್ಯಕ್ತಿತ್ವ ವಿಕಸನ

ಪ್ರಮುಖ ಮುಖ್ಯಾಂಶಗಳು

  • ರಂಗ ನಿರ್ದೇಶಕ ಜಗನ್ ಪವಾರ್ ಅಭಿಪ್ರಾಯ
  • ಮಕ್ಕಳ ರಂಗ ಶಿಬಿರ ಉದ್ಘಾಟನೆ
  • ಚಾಮರ ಫೌಂಡೇಶನ್, ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಆಯೋಜನೆ
ಮಂಗಳೂರು: ಮಕ್ಕಳ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ, ಸೃಜನಶೀಲತೆಯ ಬೆಳವಣಿಗೆಯಲ್ಲಿ ರಂಗಭೂಮಿಯ ಪಾತ್ರ ಮಹತ್ವದ್ದು ಎಂದು ರಂಗ ನಿರ್ದೇಶಕ ಜಗನ್ ಪವಾರ್ ಹೇಳಿದರು.
ಚಾಮರ ಫೌಂಡೇಶನ್, ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಆಶ್ರಯದಲ್ಲಿ ಏಳು ದಿನಗಳ ಮಕ್ಕಳ ರಂಗ ಶಿಬಿರ-2026 ಭಾನುವಾರ ಆದರ್ಶ ನಗರ, ಚಿಲಿಂಬಿ ಗುಡ್ಡೆಯಲ್ಲಿ ಉದ್ಘಾಟನೆಗೊಂಡಿತು.
ಯತೀಶ್ ವೈ.ಶೆಟ್ಟಿಯವರ ಸ್ಮರಣಾರ್ಥ ಶಿಬಿರ ಹಮ್ಮಿಕೊಳ್ಳಲಾಗಿದೆ. ಜಗನ್ ಪವಾರ್ ಶಿಬಿರ ಉದ್ಘಾಟಿಸಿ, ಮಕ್ಕಳಿಗೆ ಮೊದಲ ರಂಗ ತರಬೇತಿ ನೀಡಿದರು. ಚಾಮರ ಫೌಂಡೇಶನ್ ಟ್ರಸ್ಟಿ ಮನೀಶ್ ಕೆ.ಸಾಲ್ಯಾನ್ ಮಾತನಾಡಿದರು.
ಚಾಮರ ಫೌಂಡೇಶನ್ ಟ್ರಸ್ಟಿ ತ್ರಿಶಾ ಶೆಟ್ಟಿ ಶಿಬಿರ ನಿರ್ದೇಶಿಸಲಿದ್ದಾರೆ. ಚಾಮರ ಫೌಂಡೇಶನ್ ಟ್ರಸ್ಟಿ ಪ್ರಶಾಂತ್ ಕುಮಾರ್ ಶಿಬಿರದ ಸಮನ್ವಯ ವಹಿಸಿ ಮುನ್ನಡೆಸುತ್ತಿದ್ದಾರೆ. ಮೇ 17ರಿಂದ ಮೇ 23, 2026ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ನಡೆಯಲಿದೆ. 6ನೇ ತರಗತಿಯಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶಿಬಿರ ತೆರೆದಿದ್ದು, ಮೊದಲು ನೋಂದಾಯಿಸಿಕೊಂಡ 15ರಿಂದ 20 ಮಕ್ಕಳಿಗೆ ಅವಕಾಶವಿದೆ. ಶಿಬಿರದ ಕೊನೆಯ ದಿನ ಶಿಬಿರಾರ್ಥಿಗಳಿಂದ ರಂಗ ಪ್ರಯೋಗ ನಡೆಯಲಿದೆ. 
ಆದರ್ಶ ಫೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಕದ್ರಿ ಶ್ರೀ ಮಂಜುನಾಥ ದೇವಸ್ಥಾನ ಮೊಕ್ತೇಸರ ರಾಜೇಂದ್ರ ಚಿಲಿಂಬಿ, ಚಾಮರ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ರಚನಾ ಉಪಸ್ಥಿತರಿದ್ದರು. ಕೃತಿ ನಿರೂಪಿಸಿದರು. ಪ್ರಶಾಂತ್ ಕುಮಾರ್ ವಂದಿಸಿದರು.