ನ್ಯೂಸ್

20 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ತಂದೆಯನ್ನು ಅಪಹರಿಸಿ ಕೊಂದ ಮಕ್ಕಳು| Crime News

Uttar Pradesh: ಆಸ್ತಿ ವಿವಾದ ಮತ್ತು ಅಕ್ರಮ ಸಂಬಂಧದ ಶಂಕೆಯ ಮೇಲೆ (Crime News) ಇಬ್ಬರು ಗಂಡು ಮಕ್ಕಳು 20 ವರ್ಷಗಳ ನಂತರ ತಂದೆಯನ್ನು ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ಔರೈಯಾದಲ್ಲಿ ಡೆದಿದೆ.

ಅಕ್ರಮ ಸಂಬಂಧದ ಅನುಮಾನ ಮತ್ತು ಆಸ್ತಿ ವಿಭಜನೆಯ ವಿವಾದದಿಂದಾಗಿ ಇಬ್ಬರು ಗಂಡು ಮಕ್ಕಳು ತಮ್ಮ ಒಬ್ಬ ಸ್ನೇಹಿತನೊಂದಿಗೆ ಸೇರಿ 20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ತಂದೆಯನ್ನು ಅಪಹರಿಸಿ ಕೊಂದಿದ್ದಾರೆ.

ಮೃತ ರವೀಂದ್ರ ಸಿಂಗ್ ಯಾದವ್ ಇಟಾವಾ ಜಿಲ್ಲೆಯ ಸಿವಿಲ್ ಲೈನ್ಸ್ ಪ್ರದೇಶದ ನಾಗ್ಲಾ ಮಹಾಜೀತ್ ನಿವಾಸಿಯಾಗಿದ್ದರು. ಆದರೆ ಸುಮಾರು 20 ವರ್ಷಗಳಿಂದ, ಅವರು ಔರೈಯಾ ಜಿಲ್ಲೆಯ ಕುದರ್‌ಕೋಟ್ ಪ್ರದೇಶದ ಜೈಸಿಂಗ್‌ಪುರ ಗ್ರಾಮದಲ್ಲಿ ತಮ್ಮ ತಾಯಿಯ ಚಿಕ್ಕಪ್ಪನೊಂದಿಗೆ ವಾಸಿಸುತ್ತಿದ್ದರು. ಇದನ್ನು ತಿಳಿದ ಅವರ ಇಬ್ಬರೂ ಮಕ್ಕಳು ಸಂಬಂಧಿಕರೊಬ್ಬರ ಸಹಾಯ ಪಡೆದು ತಂದೆಯನ್ನು ಕಾರಿನಲ್ಲಿ ಕಿಡ್ನಾಪ್​ ಮಾಡಿ ಹೊಡೆದಯ ಸಾಯಿಸಿದ್ದಾರೆ.

ರವೀಂದ್ರ ಅವರ ಇಬ್ಬರು ಪುತ್ರರಾದ ಆದೇಶ್ ಯಾದವ್ ಮತ್ತು ನವೀನ್ ಯಾದವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ರವೀಂದ್ರ ಸಿಂಗ್ ಬಹಳ ಸಮಯದಿಂದ ಮನೆಯ ಹೊರಗೆ ವಾಸಿಸುತ್ತಿದ್ದರು, ಜೊತೆಗೆ ಅವನು ಮನೆಯ ಖರ್ಚಿಗೆ ಹಣ ನೀಡುತ್ತಿರಲಿಲ್ಲ, ಯಾವುದೇ ಪಾಲನ್ನು ಕೊಡಲಿಲ್ಲ. ಹೀಗಾಗಿ ತಂದೆಯನ್ನು ಕೊಂದಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. (ಏಜೆನ್ಸೀಸ್​)