ಮುಳ್ಳೂರು ಸ.ಕಿ.ಪ್ರಾ.ಶಾಲಾ ವಿದ್ಯಾರ್ಥಿಗಳು ಬಾಹ್ಯಾಕಾಸದಲ್ಲಿ 9 ತಿಂಗಳು ಕಳೆದು ಬುಧವಾರ ಭೂ ಸ್ಪರ್ಶ ಮಾಡಿದ ಸುನೀತಾ ವಿಲಿಯಮ್ಸ್ ವೇಷಭೂಷಣ ತೊಟ್ಟ ವಿದ್ಯಾರ್ಥಿಗಳು ಸಂಭ್ರಮಾಚರಣೆ ನಡೆಸಿದರು. 
ನ್ಯೂಸ್

ಧರೆಗೆ ಮರಳಿದ ಸುನೀತಾ ಸಿಹಿ ಹಂಚಿ ಸಂಭ್ರಮಿಸಿದ ಮಕ್ಕಳು

ಶನಿವಾರಸಂತೆ: ಕಳೆದ 9 ತಿಂಗಳ ಕಾಲ ಬಾಹ್ಯಾಕಾಶದಲ್ಲೇ ಕಳೆದ ಸುನಿತಾ ವಿಲಿಯಮ್ಸ್ ಮತ್ತು ತಂಡ ಬುಧವಾರ ನಸುಕಿನ 3.27ಕ್ಕೆ ಅಮೆರಿಕದ ಫ್ಲೋರಿಡಾದಲ್ಲಿ ಸಮುದ್ರದಲ್ಲಿ ಭೂ ಸ್ಪರ್ಶ ಮಾಡಿದ ಹಿನ್ನೆಲೆ ಇಲ್ಲಿಗೆ ಸಮೀಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಬುಧವಾರ ಸಿಹಿ ಹಂಚಿ ಸಂಭ್ರಮಿಸಿದರು.

ಶಾಲೆಯ ಕ್ರಿಯಾಶೀಲ ಮುಖ್ಯಶಿಕ್ಷಕ ಸಿ.ಎಸ್.ಸತೀಶ್ ಅವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳಿಗೆ ಸುನೀತಾ ವಿಲಿಯಮ್ಸ್ ಅವರ ವೇಷಭೂಷಣ ಹಾಕಿಸಿ ಅವರ ಮರಳುವಿಕೆಯ ಸಂತಸವನ್ನು ಸೃಷ್ಟಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ವಿದ್ಯಾರ್ಥಿಗಳಿಗೆ ಸುನೀತಾ ವಿಲಿಯಮ್ಸ್ ಅವರ ವಿಜ್ಞಾನ ಕ್ಷೇತ್ರದ ಸಾಧನೆ, ಅವರ ಧೈರ್ಯ ಸಾಹಸಗಳು ಅಂತರಿಕ್ಷದಲ್ಲಿ ಅವರು ಕಳೆದ ಸಮಯಗಳು ಇವುಗಳ ಬಗ್ಗೆ ಶಿಕ್ಷಕರು ವಿವರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನ ಕ್ಷೇತ್ರದತ್ತ ಆಸಕ್ತಿ ಮೂಡುವಂತೆ ಮಾಡಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಶಿಕ್ಷಕರು ನೀಡಿದ ಮಾಹಿತಿಯನ್ನು ಕೇಳಿದರು.