ಮೈಸೂರು: ವರ್ಷದ ಹಿಂದೆ ನಡೆದಿದ್ದ ಬಾಲ್ಯ ವಿವಾಹ ಸಂಬಂಧ 12 ಜನರ ವಿರುದ್ಧ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
16 ವರ್ಷದ ಬಾಲಕಿಗೆ 2023ರ ಜುಲೈ ತಿಂಗಳಲ್ಲಿ ಬಲವಂತವಾಗಿ ವಿವಾಹ ಮಾಡಲಾಗಿತ್ತು. ಸದ್ಯ ಬಾಲಮಂದಿರದಲ್ಲಿರುವ ಆ ಬಾಲಕಿಗೆ ಆಪ್ತ ಸಮಾಲೋಚನೆ ನಡೆಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕಿ ನೀಡಿದ ದೂರಿನ ಮೇರೆಗೆ ಬಾಲಕಿಯನ್ನು ವಿವಾಹವಾದ ಯುವಕ, ಆತನ ಪೋಷಕರು, ಸಂಬಂಧಿಕರು, ಬಾಲಕಿ ಪೋಷಕರು ಸೇರಿದಂತೆ ಒಟ್ಟು 12ಜನರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.