ನವದೆಹಲಿ; ಮಧ್ಯಪ್ರದೇಶದಲ್ಲಿ ಕಲುಷಿತ ಕೆಮ್ಮಿನ ಸಿರಪ್‌ಗಳಿಂದ ಮಕ್ಕಳ ಸಾವು ಸಂಭವಿಸಿದೆ ಎಂಬ ವರದಿಗಳ ಬಳಿಕ, ಭಾರತದ ಉನ್ನತ ಔಷಧ ನಿಯಂತ್ರಕ ಸಂಸ್ಥೆ ಕ್ರಮ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿದೆ. ಈ ಬಗ್ಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಔಷಧ ನಿಯಂತ್ರಕರಿಗೆ ಕಟ್ಟುನಿಟ್ಟಿನ ಸಲಹೆಯನ್ನು ನೀಡಿದ್ದು, ಔಷಧಿಯನ್ನು ಮಾರಾಟ ಮಾಡುವ ಮುನ್ನ ಸರಿಯಾಗಿ ಪರೀಕ್ಷಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮೋದಿಯವರೇ ಅಮಿತ್ ಶಾರನ್ನ ನಂಬಬೇಡಿ; ಮುಂದೆ ಅವರು ಮೀರ್ ಜಾಫರ್ ಆಗಬಹುದು; ಮಮತಾ ಬ್ಯಾನರ್ಜಿ|Mamata Banerjee
ಈ ಕೆಮ್ಮಿನ ಸಿರಪ್ಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಶಿಫಾರಸು ಮಾಡುವುದಿಲ್ಲ, ಆದರೆ ಎಚ್ಚರಿಕೆಯಿಂದ ಕ್ಲಿನಿಕಲ್ ಮೌಲ್ಯಮಾಪನವನ್ನು ಅನುಸರಿಸಬೇಕು ಎಂದು ಸಲಹೆಗಾರರು ಹೇಳಿದ್ದಾರೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ ನಕಲಿ ಕೆಮ್ಮಿನ ಸಿರಪ್ ಸೇವಿಸಿ ಹನ್ನೊಂದು ಮಕ್ಕಳು ಸಾವನ್ನಪ್ಪಿದ ನಂತರ ಈ ಶಿಫಾರಸುಗಳು ಬಂದಿವೆ. ಎನ್‌ಸಿಡಿಸಿ, ಎನ್‌ಐವಿ, ಐಸಿಎಂಆರ್, ಏಮ್ಸ್ ನಾಗ್ಪುರ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳ ತಜ್ಞರನ್ನು ಒಳಗೊಂಡ ತಂಡವು ವರದಿಯಾದ ಪ್ರಕರಣಗಳ ಹಿಂದಿನ ಎಲ್ಲಾ ಸಂಭಾವ್ಯ ಕಾರಣಗಳನ್ನು ತನಿಖೆ ಮಾಡುತ್ತಿದೆ.
ಈ ಸಲಹಾ ಪತ್ರವನ್ನು ಭಾರತದ ಔಷಧ ನಿಯಂತ್ರಕ ಜನರಲ್ (DCGI) ಡಾ. ರಾಜೀವ್ ಸಿಂಗ್ ರಘುವಂಶಿ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ರವಾನಿಸಿದ್ದಾರೆ. ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಮತ್ತು ಎಥಿಲೀನ್ ಗ್ಲೈಕಾಲ್ (EG) ನಂತಹ ವಿಷಕಾರಿ ಕೈಗಾರಿಕಾ ದ್ರಾವಕಗಳ ಉಪಸ್ಥಿತಿಯು ಉತ್ಪಾದನೆಗೆ ಮೊದಲು ಕಚ್ಚಾ ವಸ್ತುಗಳನ್ನು ಪರೀಕ್ಷಿಸಲು ವಿಫಲವಾದ ಪರಿಣಾಮವಾಗಿದೆ ಎಂದು ಹಿಂದಿನ ಹಲವಾರು ತನಿಖೆಗಳು ಬಹಿರಂಗಪಡಿಸಿವೆ. ದೇಶದ ಔಷಧ ನಿಯಂತ್ರಕ ಡಿಸಿಜಿಐ, ಇತ್ತೀಚಿನ ತಪಾಸಣೆಗಳಲ್ಲಿ ಹಲವಾರು ತಯಾರಕರು ಬಳಕೆಗೆ ಮೊದಲು ನಿಗದಿತ ಮಾನದಂಡಗಳ ಅನುಸರಣೆಗಾಗಿ ಪ್ರತಿ ಬ್ಯಾಚ್‌ನ ಪದಾರ್ಥಗಳನ್ನು ಪರೀಕ್ಷಿಸುತ್ತಿಲ್ಲ ಎಂಬುದಾಗಿ ಕಂಡುಬಂದಿದೆ ಎಂದು ಸಲಹಾ ಸಂಸ್ಥೆಯು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ‘ಕಾರ್ತಿಕ ಮಾಸ’ದಲ್ಲಿ ಈ 5 ಸ್ಥಳಗಳಲ್ಲಿ ದೀಪಗಳನ್ನು ಹಚ್ಚಿದರೆ ‘ಲಕ್ಷ್ಮಿ’ ದೇವಿಯ ಆಶೀರ್ವಾದ ಸಿಗುತ್ತದೆಯಂತೆ| kartik maasa
(ಏಜೆನ್ಸೀಸ್)
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಜ್ವರ, ಶೀತ, ಕೆಮ್ಮು ತುಂಬ ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳ ಮೇಲಂತೂ ಬಹುಬೇಗ ಪರಿಣಾಮ ಬೀರುತ್ತದೆ. ಆದರೆ, ಕಾಯಿಲೆ ನಿವಾರಿಸಬೇಕಾದ ಔಷಧಗಳೇ ಮಕ್ಕಳ ಪಾಲಿಗೆ ಮಾರಕವಾದರೆ ಗತಿ ಏನು? ಇದು ತುಂಬ ಗಂಭೀರ ಹಾಗೂ ಶೋಚನೀಯ ಸಂಗತಿ. ಈ ಕುರಿತು ಸೂಕ್ತ ತನಿಖೆ ನಡೆಸುವುದಲ್ಲದೆ, ಕಳಪೆ ಮತ್ತು ನಕಲಿ ಔಷಧಗಳ ಜಾಲವನ್ನು ನಿಮೂಲನಗೊಳಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜೆನೆರಿಕ್ ಔಷಧಗಳ ಗುಣಮಟ್ಟದ ಬಗ್ಗೆ ಆಗಾಗ ಆಕ್ಷೇಪದ ದನಿಗಳು ಕೇಳಿಬರುತ್ತಲೇ ಇವೆ. ಆದರೂ ಜೆನರಿಕ್ ಔಷಧಗಳ ಉತ್ಪಾದನೆಗೆ ಕಡಿವಾಣ ಬಿದ್ದಿಲ್ಲ. ಕೆಮ್ಮು ನಿಯಂತ್ರಣಕ್ಕೆ ನೀಡಲಾಗುವ ಸಿರಪ್ನಲ್ಲಿ ಅಪಾಯಕಾರಿ ರಾಸಾಯನಿಕಗಳನ್ನು ಸೇರಿಸಲಾಗಿದೆ ಇಲ್ಲವೆ ಕಳಪೆ ದರ್ಜೆಯ ಔಷಧ ತಯಾರಿಸಲಾಗಿದೆ ಎಂದು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಜನರು ಆರೋಪಿಸಿದ್ದಾರೆ.