ನ್ಯೂಸ್

Mobile​ ಬಳಸದಂತೆ ಗದರಿದ ತಾಯಿಯ ತಲೆಗೆ ಬ್ಯಾಟ್​ನಿಂದ ಹೊಡೆದ ಮಗ; Video Viral

ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಮೊಬೈಲ್​ ಗೀಳು ಹೆಚ್ಚಾಗುತ್ತಿದ್ದು, ಯುವ ಸಮೂಹ ಹಾಗೂ ಮಕ್ಕಳು ಇದಕ್ಕೆ ಹೆಚ್ಚು ಮಾರು ಹೋಗುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ನಾವೂ ನೋಡಿರುವಂತೆ ಮೊಬೈಲ್​ ವಿಚಾರವಾಗಿ ಅಣೇಕ ಅಹಿತಕರ ಘಟನೆಗಳು ನಡೆದಿರುವುದನ್ನು ನೋಡಿದ್ದೇವೆ. ಅದೇ ರೀತಿ ಇದೀಗ ಪುಟ್ಟ ಬಾಲಕನೋರ್ವ ಮೊಬೈಲ್​ಗಾಗಿ ತನ್ನ ತಾಯಿಯ ತಲಯೆನ್ನು ಬ್ಯಾಟ್​ನಿಂದ ಹೊಡೆದಿರುವ ಘಟನೆ ವರದಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ವರದಿಯಾಗಿಲ್ಲ. ದಿಲೀಪ್​ ಕುಮಾರ್​ ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಬಾಲಕನೋರ್ವ ಶಾಲೆಯಿಂದ ಬಂದ ಬಳಿಕ ಟಿವಿಯನ್ನು ಆನ್​ ಮಾಡಿ ಕುಳಿತುಕೊಂಡಿರುತ್ತಾನೆ. ಇದನ್ನು ನೋಡಿದ ತಾಯಿ ಮಗನಿಗೆ ಗದರಿ ಮೊಬೈಲ್​ ಕಸಿದುಕೊಂಡು ಎರಡೇಟು ನೀಡಿ ಊಟಕ್ಕೆ ಕುಳಿತುಕೊಳ್ಳುತ್ತಾಳೆ. ತಾಯಿ ಬೈದ ತಕ್ಷಣ ಪುಸ್ತಕ ಹಿಡಿದು ಕುಳಿತುಕೊಳ್ಳುವ ಬಾಲಕ ಕೆಲ ಕ್ಷಣದ ಬಳಿಕ ಎದ್ದು ಹೊರಗೆ ಹೋಗುತ್ತಾನೆ. ವಾಪಸ್​ ಬಂದ ಬಳಿಕ ಅಲ್ಲೇ ಇಡಲಾಗಿದ್ದ ಕ್ರಿಕೆಟ್​ ಬ್ಯಾಟನ್ನು ತೆಗೆದುಕೊಂಡು ತಾಯಿಯ ತಲೆಗೆ ಬಲವಾಗಿ ಹೊಡೆಯುತ್ತಾನೆ. ತಲೆಗೆ ಏಟು ಬಿದ್ದ ತಕ್ಷಣ ತಾಯಿ ಎಚ್ಚರ ತಪ್ಪಿ ಬೀಳುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುವ ಈ ವಿಡಿಯೋವನ್ನು ಅಕ್ಟೋವರ್​ 02ರಂದು ಹಂಚಿಕೊಳ್ಳಲಾಗಿದ್ದು, 1.5 ಮಿಲಿಯನ್​ಗೂ ಅಧಿಕ ಬಾರಿ ವೀಕ್ಷಣೆಗೆ ಒಳಪಟ್ಟಿದೆ. ಆಧರೆ, ಈ ವಿಡಿಯೋ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಕೆಲವರು ಫ್ಯಾಕ್ಟ್​ ಚೆಕ್​ ಮಾಡಬೇಕಾಗಿದೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ಇನ್ನೂ ಕೆಲವರು ಬಾಲಕನ ನಡೆಯನ್ನು ಖಂಡಿಸಿ ಕಿಡಿಕಾರಿದ್ದಾರೆ.