ನ್ಯೂಸ್

ಮನೆಗೆ ಕನ್ನ ಹಾಕಲು ಬಂದು ಬಾಲಕಿಯನ್ನು ಕದ್ಯೊಯ್ದ ಖದೀಮ!

ಚಿಕ್ಕೋಡಿ: ಮನೆಗೆ ಕನ್ನ ಹಾಕಲು ಬಂದ ಖದೀಮನೊಬ್ಬ ಮನೆಯಲ್ಲಿದ್ದ ಬಾಲಕಿಯನ್ನು ಅಪಹರಿಸಿರುವ ವಿಚಿತ್ರ ಘಟನೆ ಬೆಳಗಾವಿಯ ಮಾಂಜರಿವಾಡಿ ಗ್ರಾಮದಲ್ಲಿ ನಡೆದಿದೆ.

ಅನೀಲ್ ರಾಮು ಲಂಬೂಗೋಳ (31) ಬಾಲಕಿ ಅಪಹರಿಸಿದ ಖದೀಮ. ಸುರೇಶ್ ಕಾಂಬಳೆ ಎಂಬುವವರ ಮಗಳು ಪ್ರಿಯಾ ಕಾಂಬಳೆ (11) ಅಪಹರಣವಾದ ಬಾಲಕಿ.

ಸಧ್ಯ ಬಾಲಕಿ ಪ್ರಿಯಾಗಾಗಿ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದು, ಪ್ರಿಯಾ ಕಾಣೆಯಾದ ಬಗ್ಗೆ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.