ಚಿಕ್ಕಬಳ್ಳಾಪುರ : ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿ ನಡೆಯುತ್ತಿರುವ ಪ್ರತಿಭಟನೆ, ಟ್ರ್ಯಾಕ್ಟರ್ ಜಾಥಾ ಬೆಂಬಲಿಸಿ ಮಂಗಳವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ಜಿಲ್ಲೆಯಿಂದ ಟ್ರ್ಯಾಕ್ಟರ್‌ಗಳಲ್ಲಿ ತೆರಳುತ್ತಿದ್ದ ರೈತರನ್ನು, ತಾಲೂಕಿನ ಚದಲಪುರ ಕ್ರಾಸ್‌ಬಳಿ ಪೊಲೀಸರು ತಡೆದಿದ್ದರಿಂದ ಪರಸ್ಪರ ಮಾತಿನ ಚಕಮಕಿ ನಡೆಯಿತು.
ಬೆಳಗ್ಗೆ ಚದಲಪುರ ಕ್ರಾಸ್ ಬಳಿ ರೈತರು ಟ್ರಾೃಕ್ಟರ್‌ಗಳೊಂದಿಗೆ ಜಮಾಯಿಸುತ್ತಿದ್ದಂತೆ ಪೊಲೀಸರು, ಟ್ರ್ಯಾಕ್ಟರ್‌ನ್ನು ಇಲ್ಲಿಯೇ ಬಿಟ್ಟು ಪ್ರತಿಭಟನೆ ತೆರಳಬಹುದು ಎಂದಾಗ ವಾಗ್ವಾದ ನಡೆಯಿತು.
ಕೇಂದ್ರ ಸರ್ಕಾರ ಕೃಷಿ ಸಂಬಂಧಿ ಕಾಯ್ದೆಗಳಿಗೆ ಮಾರಕ ನಿಯಮಗಳನ್ನು ಸೇರಿಸಿ, ತಿದ್ದುಪಡಿ ಮಾಡಿರುವುದರಿಂದ ಕಾರ್ಪೋರೇಟ್ ಕಂಪನಿಗಳಿಗೆ ಹೆಚ್ಚು ಲಾಭವಾಗಲಿದ್ದು, ರೈತರು ಕೃಷಿ ಭೂಮಿ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೊಳಗಾಗಲಿದ್ದಾರೆ. ಕಷ್ಟಪಟ್ಟು ಬೆಳೆಯನ್ನು ಬೆಳೆದರೂ ಪರಿಶ್ರಮದ ಲ ಉದ್ಯಮಿಗಳ ಪಾಲಾಗಲಿದೆ ಎಂದು ರೈತಸಂಘ ಮತ್ತು ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ದೇಶದ ವಿವಿಧ ಭಾಗಗಳಲ್ಲಿ ಕಾಯ್ದೆಗಳ ಜಾರಿಗೆಗೆ ಆಕ್ರೋಶ ವ್ಯಕ್ತವಾಗಿದೆ. ದೆಹಲಿಯಲ್ಲಿ 60 ದಿನಗಳಿಂದಲೂ ರೈತರು ಶಾಂತಿಯುತ ಧರಣಿ ನಡೆಸಿದರೂ ಸರ್ಕಾರ ಸ್ಪಂದಿಸದೇ ಹಠಮಾರಿ ಧೋರಣೆ ತೋರುತ್ತಿದೆ ಎಂದು ಟೀಕಿಸಿದ ಭೈರೇಗೌಡ, ಗಣರಾಜ್ಯೋತ್ಸವ ದಿನದಂದು ನಡೆಯುತ್ತಿರುವ ಹೋರಾಟದಿಂದ ಬೆದರಿದ ಸರ್ಕಾರ ನಾನಾ ತಂತ್ರಗಳ ಮೂಲಕ ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಕಿಡಿಕಾರಿದರು.
ಗ್ರಾಮಗಳಲ್ಲಿ ತಡೆ ಜಿಲ್ಲೆಯಲ್ಲಿ ಪ್ರತಿ ಗ್ರಾಮದ ಮುಖ್ಯರಸ್ತೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಟ್ರಾೃಕ್ಟರ್ ಸಂಚಾರವನ್ನು ತಡೆದಿರುವುದಕ್ಕೆ ರೈತರಿಂದ ಆಕ್ರೋಶ ವ್ಯಕ್ತವಾಯಿತು. ಚದಲಪುರ, ಮಂಡಿಕಲ್, ಮಂಚನಬಲೆ ಸೇರಿ ಪ್ರಮುಖ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಪೊಲೀಸ್ ಪಹರೆ ಕಾದು, ಟ್ರಾೃಕ್ಟರ್‌ಗಳನ್ನು ಹೊರಗೆ ತರದಂತೆ ನೋಡಿಕೊಂಡರು. ಇದನ್ನು ಮೀರಿ ಬಂದವರನ್ನು ತಡೆದು ವಾಪಸ್ ಕಳುಹಿಸಿದರು. ಕೊನೆಗೆ ರೈತರು ಕಾರು, ಬೈಕ್ ಸೇರಿ ಇತರ ವಾಹನಗಳಲ್ಲಿ ಬೆಂಗಳೂರಿಗೆ ತೆರಳಿದರು. ಸೋಮವಾರ ರೈತರೊಂದಿಗೆ ಸಭೆ ನಡೆಸಿದ್ದ ಸಚಿವ ಡಾ ಕೆ.ಸುಧಾಕರ್, ಟ್ರಾ್ಯೃಕ್ಟರ್ ಬಿಟ್ಟು ರ‌್ಯಾಲಿಗೆ ತೆರಳಲು ಸೂಚಿಸಿದ್ದರು, ಸಚಿವರ ಸೂಚನೆಗೆ ರೈತರು ಸೆಡ್ಡು ಹೊಡೆಯಲು ಮುಂದಾದಾಗ ಪೊಲೀಸರು ಕಡಿವಾಣ ಹಾಕಿದರು.
ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರ ಕಾಯ್ದೆ ತಂದಿದೆ. ಆದರೆ, ಕೆಲ ದಲ್ಲಾಳಿಗಳು, ರಾಜಕೀಯ ಪ್ರೇರಿತ ವ್ಯಕ್ತಿಗಳು ರೈತರ ದಿಕ್ಕು ತಪ್ಪಿಸಿ, ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಡಾ ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಸಚಿವ