ನ್ಯೂಸ್

ಚಿಕ್ಕಬಳ್ಳಾಪುರದಲ್ಲಿ ರೈಲಿಗೆ ಸಿಲುಕಿ ಮೂವರ ದೇಹಗಳು ಛಿದ್ರಛಿದ್ರ! ಸಾವಿನ ರಹಸ್ಯ ಬೆನ್ನಟ್ಟಿದ ಪೊಲೀಸರಿಗೆ ಸುಳಿವು ನೀಡುತ್ತಾ ಶರ್ಟ್​?

ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪ ರೈಲ್ವೆ ಹಳಿ ಮೇಲೆ ಮೂವರ ಮೃತದೇಹಗಳು ಛಿದ್ರಛಿದ್ರವಾಗಿ ಬಿದ್ದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಒಂದೇ ಕುಟುಂಬದ ಮೂವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಇಲ್ಲವೇ ಯಾರೋ ಕೊಲೆ ಮಾಡಿ ಶವಗಳನ್ನು ರೈಲ್ವೆ ಹಳಿ ಮೇಲೆ ಎಸೆದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ. ಓರ್ವ ಪುರುಷ ಹಾಗೂ ಇಬ್ಬರು ಮಹಿಳೆಯರು ಮೃತದೇಹಗಳು ಗುರುತು ಸಿಗದಷ್ಟು ಛಿದ್ರವಾಗಿವೆ.

ಸುದ್ದಿ ತಿಳಿಯುತ್ತಿದ್ದಂತೆ ಯಶವಂತಪುರ ಪೊಲೀಸ್ ಠಾಣೆ ರೈಲ್ವೆ ಪಿಎಸ್ಐ ಶಿವಕುಮಾರ್ ಹಾಗೂ ಗೌರಿಬಿದನೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೃತನ ಶರ್ಟ್ ಮೇಲೆ 'ವಿನಾಯಕ ಟೈಲರ್ಸ್ ಗೌರಿಬಿದನೂರು' ಎಂಬ ಮಾಹಿತಿ ಇದ್ದು, ಪೊಲೀಸರು ತನಿಖೆ ಚುರುಕು ಗೊಳಿಸಿದ್ದಾರೆ.