ಶಾಸಕ ಪ್ರದೀಪ್ ಈಶ್ವರ್ ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ಇದು. 
ನ್ಯೂಸ್

ಹೆಣ್ಣು ಮಗುವಿನ ತಂದೆಯಾದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್

  • ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮುದ್ದಾದ ಹೆಣ್ಣು ಮಗುವಿನ ತಂದೆ

  • ಮಗುವಿನ ಆಗಮನದ ಖುಷಿಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್

  • ಶಾಸಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳು ಹರಿದುಬರುತ್ತಿವೆ.

ಸದಾ ಯಾವುದಾದರೂ ವಿಚಾರಕ್ಕೆ ಸುದ್ದಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್​ ಈಶ್ವರ್ ಅವರು ತಮ್ಮ ಜೀವನದ ಅತ್ಯಂತ ಖುಷಿಯ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಅವರು ಈಗ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ. ಅವರು ಮಗುವನ್ನು ಹಿಡಿದುಕೊಂಡಿರುವ ವಿಡಿಯೋಗಳು ಸದ್ಯ ವೈರಲ್ ಆಗಿವೆ. ಅವರ ಬೆಂಬಲಿಗರು ಹಾಗೂ ರಾಜಕೀಯ ಗಣ್ಯರು ಶುಭ ಹಾರೈಸುತ್ತಿದ್ದಾರೆ.

ವಿಡಿಯೋ ಮೂಲಕ ಸಂಭ್ರಮ ಹಂಚಿಕೊಂಡ ಶಾಸಕ

ಹೆಣ್ಣು ಮಗು. ನಮ್ಮ ಮನೆಗೆ ‘ಲಕ್ಷ್ಮಿ’ ಆಗಮಿಸಿದ್ದಾಳೆ. ದೇವರ ಆಶೀರ್ವಾದದಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಮಗುವನ್ನು ಹಿಡಿದುಕೊಂಡಿರುವ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ. ಲವ್​ ಮಾಕ್ಟೇಲ್ ಸಿನಿಮಾದ ಮುದ್ದು ಮಗಳೆ ಹಾಡನ್ನು ವಿಡಿಯೋಗೆ ಕನೆಕ್ಟ್ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮಗುವಿಗೆ ಮತ್ತು ದಂಪತಿಗೆ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.

ಇತ್ತೀಚೆಗೆ ಅವರು ಕಾಲು ಮುರಿತಕ್ಕೊಳಗಾಗಿದ್ದ ಬಗ್ಗೆ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಬಿದ್ದು ಗಂಭೀರವಾಗಿ ಗಾಯವಾಗಿದ್ದು, ವೈದ್ಯರು 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಆದರೆ ನನ್ನೊಳಗಿನ ಶಿಕ್ಷಕ ಹಾಗೂ ಆಡಳಿತಗಾರ ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ.

ಕೆಲಸ ಮಾಡಬೇಕೆಂದಿದ್ದರೆ, ಅದಕ್ಕೆ ದಾರಿ ಸಿಕ್ಕೇ ಸಿಗುತ್ತದೆ. ಹಾಗಾಗಿ, ನಾವು ನೇರವಾಗಿ ತರಗತಿಯ ಒಳಗೆಯೇ ಹಾಸಿಗೆಯನ್ನು ಸಿದ್ಧಪಡಿಸಿಕೊಂಡಿದ್ದೇನೆ. ನಾನು ನನ್ನ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ತೊಡಗಿಸಿಕೊಳ್ಳುತ್ತಿದ್ದೇನೆ ಮತ್ತು ಅದೇ ಸಮಯದಲ್ಲಿ ಇಲ್ಲಿಂದಲೇ ನನ್ನ ಕ್ಷೇತ್ರದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದರು, (ಏಜೆನ್ಸೀಸ್).