ನ್ಯೂಸ್

224 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕೋಟಿ ಮಂದಿ ಮತದಾರಿದ್ದಾರೆ: ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾಹಿತಿ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿರುವ ಚುನಾವಣಾ ಆಯೋಗ, ರಾಜ್ಯದಲ್ಲಿನ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಈ ಬಾರಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ 224 ಕ್ಷೇತ್ರದಲ್ಲಿ ಪ್ರಸ್ತುತ ಒಟ್ಟು 5,31,33,054 ಮತದಾರರಿದ್ದಾರೆ. ಈ ಪೈಕಿ 26,68,21,056 ಪುರುಷ ಮತದಾರರು ಹಾಗೂ 26,39,84,83 ಮಹಿಳಾಮತದಾರಿದ್ದಾರೆ. ಸರ್ಕಾರಿ ನೌಕರ ಮತದಾರರ ಪೈಕಿ 47,488 ಪುರುಷರು, 45,897 ಮಹಿಳಾ ಹಾಗೂ 1,591 ಇತರೆ ಮತದಾರರಿದ್ದಾರೆ. ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟವರು ಮತದಾನ ಮಾಡಿ ಎಂದು ಹೇಳಿದ್ದಾರೆ.

ಯುವ ಮತದಾರರ ವಿವರ: 6,45,140 ಮಂದಿ ಪುರುಷ ಮತರಾರರು ಹಾಗೂ 5,26,237 ಮಹಿಳೆಯರು ಈ ಬಾರಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಈ ವೇಳೆ ಜಿಲ್ಲಾವಾರು ಮತದಾರರ ಸಂಖ್ಯೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಬಳ್ಳಾರಿ ನಗರದಲ್ಲಿ ಅತೀ ಹೆಚ್ಚು ಜನ ಮತ ಚಲಾಯಿಸಲಿದ್ದಾರೆ ಎಂದು ಅಂಕಿ ಅಂಶವನ್ನು ಬಿಡುಗಡೆ ಮಾತನಾಡಿದೆ.

ಚುನಾವಣಾ ನೀತಿ ಸಂಹೊತೆ ಪ್ರಕಟವಾದ ದಿನದಿಂದ ಇಲ್ಲಿವರೆಗೆ 265 ಕೋಟಿ ರೂ. ಹಣ ಸೀಜ್ ಮಾಡಲಾಗಿದೆ. 673 ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ.