ನ್ಯೂಸ್

ಸುಮನಹಳ್ಳಿ ರುದ್ರಭೂಮಿಯಲ್ಲಿ ಚಿದಾನಂದಮೂರ್ತಿ ಅಂತ್ಯಕ್ರಿಯೆ; ರಾಜ್ಯ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಚಿಮೂ ಪುತ್ರ

ಬೆಂಗಳೂರು: ಹಿರಿಯ ಸಂಶೋಧಕ, ಕನ್ನಡ ಬರಹಗಾರ ಡಾ. ಚಿದಾನಂದ ಮೂರ್ತಿ ಅವರ ಅಂತ್ಯಕ್ರಿಯೆ ಇಂದು ಸುಮನಹಳ್ಳಿ ಚಿತಾಗಾರದಲ್ಲಿ ನಡೆಯಿತು.

ಯಾವುದೇ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸುವುದು ಚಿದಾನಂದಮೂರ್ತಿಯವರಿಗೆ ಇಷ್ಟವಿರಲಿಲ್ಲ. ಅವರ ಕೊನೆಯಾಸೆಯಂತೆಯೇ ಕುಟುಂಬಸ್ಥರು ಅಂತಿಮ ಸಂಸ್ಕಾರ ನಡೆಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸೋಮಣ್ಣ, ಮುನಿರತ್ನ ಮತ್ತಿತರರು ಚಿತಾಗಾರಕ್ಕೆ ಆಗಮಿಸಿ ಚಿಮೂ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಅಂತ್ಯಕ್ರಿಯೆ ಬಳಿಕ ಮಾತನಾಡಿದ ಚಿದಾನಂದಮೂರ್ತಿಯವರ ಪುತ್ರ, ನಾವೆಲ್ಲರೂ ರಾಜ್ಯಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇವೆ. ಹುಟ್ಟೂರಲ್ಲೇ ಅಂತ್ಯಕ್ರಿಯೆ ನಡೆಸಬೇಕು ಎಂದು ಅಲ್ಲಿನವರು ಒತ್ತಾಯಿಸಿದ್ದರು. ಆದರೆ ನಮ್ಮ ತಂದೆಯ ಆಸೆ ಬೇರೆಯಿತ್ತು. ಹಾಗಾಗಿ ಅವರೆಲ್ಲರ ಕ್ಷಮೆ ಕೇಳುತ್ತೇವೆ. ಅವರ ಅಸ್ತಿಯನ್ನು ಹಂಪಿಯಲ್ಲಿ ವಿಸರ್ಜನೆ ಮಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಆ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳಿದರು.