ತಮಿಳುನಾಡು: ಕಳೆದ ವಾರ ಸಿಂಗಾಪುರಲ್ಲಿ ನಡೆದ ವಿಶ್ವ ಚೇಸ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಚಾಂಪಿಯನ್ ಶಿಪ್ ಆಗಿ ಇತಿಹಾಸ ನಿರ್ಮಿಸಿದ ಡಿ.ಗುಕೇಶ್(Gukesh) ಅವರಿಗೆ ದೇಶಾದ್ಯಂತ ಭರಪೂರ ಶುಭಾಶಯಗಳು ಹರಿಬಂದಿವೆ.
ಇದೀಗ, ನಟ ಸೂಪರ್ಸ್ಟಾರ್ ರಜನಿಕಾಂತ್ ಮತ್ತು ಅಮರಾನ್ ಚಿತ್ರ ಖ್ಯಾತಿಯ ನಟ ಶಿವಕಾರ್ತಿಕೇಯನ್ ಭೇಟಿ ಮಾಡಿದ ಗುಕೇಶ್ಗೆ ವಿಶೇಷ ಶುಭಾಶಯ ಕೋರಿದ್ದಾರೆ.
ಈ ಕುರಿತು ಡಿ.ಗುಕೇಶ್ ರಜನಿಕಾಂತ್ ಮತ್ತು ಶಿವಾಕಾರ್ತೇಕೆಯನ್ ಅರನ್ನು ಭೇಟಿ ಮಾಡಿದ ಫೋಟೊಗಳನ್ನು ತಮ್ಮ ಹಂಚಿಕೊಂಡಿದ್ದಾರೆ.
ರಜನಿಕಾಂತ್ ಅವರು ಕಪ್ಪು ಕುರ್ತಾ ಮತ್ತು ಬೂದು ಬಣ್ಣದ ಲೂಂಗಿಯನ್ನು ಧರಿಸಿದ್ದು, ಡಿ.ಗುಕೇಶ್ಗೆ ಸನ್ಮಾನ ಮಾಡಿದ್ದಾರೆ. ಬಳಿಕ ಪರಮಾನಂದ ಅಧ್ಯಾತ್ಮ ಪರಮಹಂಸ ಯೋಗಾನಂದರ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಇನ್ನು ಗುಕೇಶ್ ಅವರು ಈ ಕುರಿತು ಬರೆದುಕೊಂಡಿದ್ದು, ''ಸೂಪರ್ಸ್ಟಾರ್ ರಜನಿಕಾಂತ್ ಸರ್ ನಿಮ್ಮ ಅತ್ಮೀಯ ಹಾರೈಕೆಗಳಿಗೆ ಮತ್ತು ನಮ್ಮೊಂದಿಗೆ ಸಮಯ ಕಳೆಯುವ ಮೂಲಕ ನಮ್ಮ ಬಳಿ ನಿಮ್ಮ ಜ್ಞಾನವನ್ನು ಹಂಚಿಕೊಂಡಿದ್ದಕ್ಕಾಗಿನ ಧನ್ಯವಾದಗಳು'' ಎಂದಿದ್ದಾರೆ.
ನಟ ಶಿವಕಾರ್ತಿಕೇಯನ್ ಅವರನ್ನು ಭೇಟಿ ಮಾಡಿದ ಗುಕೇಶ್ ಅವರ ಮನೆಯಲ್ಲಿ ಸಲ್ಪ ಸಮಯ ಕಳೆದಿದ್ದಾರೆ. ಅಮರಾನ್ ಯಶಸ್ಸಿನಲ್ಲಿರುವ ನಟ ಕೂಡ ಗುಕೇಶ್ ಅವರನ್ನು ಅತ್ಮಿಯತೆಯಿಂದ ಬರಮಾಡಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ. ಇನ್ನು ಗುಕೇಶ್ಗೆ ನಟ ಐಷಾರಾಮಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಗುಕೇಶ್ ಅವರನ್ನು ವಿವಿಧ ಚಿತ್ರರಂಗ ಹಲವು ಸೆಲಿಬ್ರಿಟಿಗಳು ಅವರ ಸಾಧನೆಯನ್ನು ಕೊಂಡಡಿದ್ದಾರೆ,(ಏಜೆನ್ಸೀಸ್).