ಚೆನ್ನೈ: ಸಾಮಾನ್ಯವಾಗಿ ಆ್ಯಂಬುಲೆನ್ಸ್ನಲ್ಲಿ ರೋಗಿಗಳನ್ನು ಕರೆದೊಯ್ಯುತ್ತಾರೆ ಎಂದರೆ ಯಾವುದೋ ಆರೋಗ್ಯ ತುರ್ತು ಪರಿಸ್ಥಿತಿಯೇ ಇರುತ್ತದೆ. ಆದರೆ, ಆ ತುರ್ತುಪರಿಸ್ಥಿತಿಗಿಂತಲೂ ವಿಐಪಿಗಳ ಎಮರ್ಜೆನ್ಸಿಯೆ ಹೆಚ್ಚಾಗಿರುತ್ತದೆ. ಇದು ಪದೇಪದೇ ಸಾಬೀತಾಗುತ್ತಿರುವ ವಿಚಾರ. ಅಂಥದ್ದೇ ಘಟನೆ ಚೆನ್ನೈನಲ್ಲೂ ನಡೆದು ಮತ್ತೊಮ್ಮೆ ವಿಐಪಿಗಳಿಗೇ ಹೆಚ್ಚು ತುರ್ತು ಎಂಬುದು ಸಾಬೀತಾಗಿದೆ!
ತುರ್ತಾಗಿ ಆಸ್ಪತ್ರೆಗೆ ಹೋಗುತ್ತಿದ್ದ ಆ್ಯಂಬುಲೆನ್ಸ್ ಒಂದನ್ನು ಚೆನ್ನೈನಲ್ಲಿ ಪೊಲೀಸರು ತಡೆದು, ವಿಐಪಿ ಕಾನ್ವೇ ಹೋಗುವುದಕ್ಕೆ ದಾರಿ ಮಾಡಿಕೊಟ್ಟ ಶಾಕಿಂಗ್ ಘಟನೆ ಸೋಮವಾರ ನಡೆದಿದೆ. ಇದು ನಗರದ ಐಲ್ಯಾಂಡ್ ಗ್ರೌಂಡ್ಸ್ ಸಮೀಪ ನಡೆದಿದೆ. ಪೊಲೀಸರು ಆ್ಯಂಬುಲೆನ್ಸ್ ಜತೆಗೆ ಇತರೆ ವಾಹನಗಳನ್ನೂ ತಡೆದು ನಿಲ್ಲಿಸಿದ ವಿಡಿಯೋ ವೈರಲ್ ಆಗಿದೆ.
ವಿಐಪಿಗಳ ಸುಗಮ ಸಂಚಾರಕ್ಕೆ ಪೊಲೀಸರು ರಸ್ತೆ ಮಧ್ಯೆ ಬ್ಯಾರಿಕೇಡ್ ಅಳವಡಿಸಿರುವ ದೃಶ್ಯವೂ ವಿಡಿಯೋದಲ್ಲಿದೆ. ಈ ವಿಡಿಯೋವನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ. (ಏಜೆನ್ಸೀಸ್)