ನ್ಯೂಸ್

ರೀಲ್ ಕ್ರೇಜ್​ನಲ್ಲಿ ದುಸ್ಸಾಹಸ.. ಕೆರೆಯಲ್ಲಿ ಬೆಂಕಿಗೆ ಹಾರಿದ ಯುವಕರು

ಚೆನ್ನೈ: ಹೆಸರು ಮತ್ತು ಹಣ ಗಳಿಕೆ ಉದ್ದೇಶದಿಂದ ಹಲವರು ಹಲವು ಬಗೆಯ ರೀಲ್ಸ್​ ಮಾಡುತ್ತಿರುತ್ತಾರೆ. ಇದರಲ್ಲಿ ಅನೇಕರು ತಮ್ಮ ಪ್ರಾಣದ ಮೇಲಿನ ಹಂಗು ತೊರೆದು ವೀಡಿಯೋ ಮಾಡಲು ಮುಂದಾಗುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ..

ಯೂಟ್ಯೂಬರ್ ರಂಜಿತ್ ಬಾಲಾ ಮತ್ತು ಆತನ ಸ್ನೇಹಿತರು ತೂತುಕುಡಿ ಜಿಲ್ಲೆಯ ಸತ್ತಾಂಕುಲಂನಲ್ಲಿ ಕೆರೆ ನೀರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಬಳಿಕ ಹಾರಿದ್ದಾರೆ.

ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್​ಗಳನ್ನು ಮಾಡುತ್ತಿದ್ದಾರೆ.

ಕೆರೆಯ ಪಕ್ಕದ ಗೋಡೆಯ ಮೇಲೆ ನಿಂತಿದ್ದ ರಂಜಿತ್​ಬಾಲಾ ಮತ್ತು ಆತನ ಸ್ನೇಹಿತ ಕೆರೆಯ ನೀರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಎಲ್ಲರೂ ಬೆಂಕಿಯ ಮಧ್ಯದಲ್ಲಿ ಹಾರಿದ್ದಾರೆ. ಈ ಸಂದರ್ಭದಲ್ಲಿ ಒಬ್ಬನ ಮೇಲೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಅವನ ಪ್ರಾಣಕ್ಕೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.