ನ್ಯೂಸ್

ಡೊನಾಲ್ಡ್​ ಟ್ರಂಪ್​ಗಾಗಿ 107ಕೆ.ಜಿಯ ಇಡ್ಲಿ ತಯಾರಿಸಿದ ವ್ಯಕ್ತಿ: ಇಡ್ಲಿಯಲ್ಲೂ ಕಾಣಿಸ್ತಾರೆ ಮೋದಿ, ಟ್ರಂಪ್​

ಚೆನ್ನೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅನೇಕ ಕಲಾಭಿಮಾನಿಗಳು ತಮ್ಮ ಕಲೆಯ ಮೂಲಕ ಟ್ರಂಪ್​ಗೆ ಸ್ವಾಗತ ಕೋರಿದ್ದಾರೆ. ಮರಳಿನಲ್ಲಿ ಆರ್ಟ್​, ಕಲ್ಲಂಗಡಿ ಹಣ್ಣಿನಲ್ಲಿ ಟ್ರಂಪ್​ನ ಚಿತ್ರವನ್ನೆಲ್ಲ ಬಿಡಿಸಿ ಟ್ರಂಪ್​ ಮತ್ತು ಮೋದಿ ಬಗ್ಗೆ ತಮಗಿರುವ ಪ್ರೀತಿ, ಅಭಿಮಾನವನ್ನು ತೋರಿಸಿಕೊಂಡಿದ್ದಾರೆ. ಇದೇ ರೀತಿಯಲ್ಲಿ ಚೆನ್ನೈನ ಒಬ್ಬ ವ್ಯಕ್ತಿ ಬರೋಬ್ಬರಿ 107ಕೆ.ಜಿ ತೂಕದ ಇಡ್ಲಿಯನ್ನು ತಯಾರಿಸಿ ಟ್ರಂಪ್​ಗೆ ಸ್ವಾಗತ ಕೋರಿದ್ದಾರೆ.

ಚೆನ್ನೈನ ಫುಡ್​ ಡೆಕೋರೇಟರ್​ ಒಬ್ಬ ಇಡ್ಲಿಯಲ್ಲಿ ಡೊನಾಲ್ಡ್​ ಟ್ರಂಪ್​, ಮೋದಿ ಮತ್ತು ಎರಡು ರಾಷ್ಟ್ರಗಳ ಧ್ವಜವನ್ನು ಮೂಡಿಸಿದ್ದಾನೆ. 107 ಕೆ.ಜಿ ತೂಕವಿರುವ ಈ ಮೂರು ಇಡ್ಲಿಗಳನ್ನು ಮಾಡಲು ಇವನ ಜತೆ ಆರು ಜನರು ತಂಡವೊಂದು ಒಟ್ಟು 36 ತಾಸುಗಳ ಕಾಲ ಕೆಲಸ ಮಾಡಿದೆ.

ಈ ಇಡ್ಲಿಗಳ ಫೋಟೋವನ್ನು ನ್ಯಾಚುರಲ್​ ಡಯೆಟ್​ ಥೆರಫಿ ಸೆಂಟರ್​ನವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)