Flight : ಭಾನುವಾರ (30) ಬೆಳಗ್ಗೆ ಜೈಪುರದಿಂದ ಚೆನ್ನೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ವಿಮಾನ ಟೇಕ್ ಆಫ್ ಆದ ನಂತರ ರನ್‌ವೇಯಲ್ಲಿ ಲ್ಯಾಂಡಿಂಗ್ಗೂ ಮುನ್ನ ಅದರ ಟೈರ್ ಸ್ಪೋಟಗೊಂಡಿರುವುದು ಕಂಡು ಬಂದಿದೆ. ಅಪಾಯದಿಂದ ಪಾರಾಗಲು ಚೆನ್ನೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಸಿಬ್ಬಂದಿ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಲು ಸಹಕಾರ ನೀಡಿದರು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮ್ಯಾನ್ಮಾರ್ ಭೂಕಂಪಕ್ಕೆ 1,600ಕ್ಕೂ ಅಧಿಕ ಮಂದಿ ಬಲಿ – 3,000 ಕ್ಕೂ ಹೆಚ್ಚು ಮಂದಿಗೆ ಗಾಯ! Earthquake
ವಿಮಾನ ಲ್ಯಾಂಡಿಂಗ್ ಆಗುವುದಕ್ಕೂ ಮದಲೇ ಅದರ ಟೈರ್ ಸ್ಪೋಟಗೊಂಡಿದೆ, ಸದ್ಯ ಕೂಡಲೇ ಇದನ್ನು ಗಮನಿಸಿದ ಪೈಲೆಟ್ ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಂತಹ ಸಂದರ್ಭಗಳಲ್ಲಿ ಲ್ಯಾಂಡಿಂಗ್‌ಗೆ ಅನುಸರಿಸಬೇಕಾದ ಮಾನದಂಡಗಳ ಪ್ರಕಾರ ಕಾರ್ಯ ನಿರ್ವಹಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿಮಾನದ 2ನೇ ಸಂಖ್ಯೆಯ ಟೈರ್ ಹಾನಿಗೊಳಗಾಗಿದ್ದು, ಪರಿಶೀಲನೆ ವೇಳೆ ಟೈರ್‌ನ ಒಳಭಾಗದಿಂದ ಅದರ ತುಂಡುಗಳು ಹೊರಬಂದಿರುವುದಾಗಿ ಕಂಡುಬಂದಿದೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.