ನ್ಯೂಸ್

ಸೌದಿ ದೊರೆ ಭಾರತಕ್ಕೆ ಉಡುಗೊರೆಯಾಗಿ ನೀಡಿದ ಚೀತಾ ಹೃದಯಾಘಾತದಿಂದ ಮೃತ್ಯು

ಹೈದರಾಬಾದ್​: ಸೌದಿ ಅರೇಬಿಯಾದ ದೊರೆ ಮೊಹಮ್ಮದ್​ ಅಲ್​ ಸೌದ್​​ ಭಾರತಕ್ಕೆ ಉಡುಗೊರೆಯಾಗಿ ನೀಡಿದ್ದ ಅಬ್ದುಲ್ಲಾ(15) ಹೆಸರಿನ ಗಂಡು ಚೀತಾ ಹೃದಯಾಘಾತದಿಂದ ವಿಧಿವಶವಾಗಿದೆ ಎಂದು ತಿಳಿದು ಬಂದಿದೆ.

ಹೈದರಾಬಾದಿನ ಜವಾಹರ್​ಲಾಲ್​ ನೆಹರೂ ಮೃಗಾಲಯಕ್ಕೆ ಸೌದಿ ದೊರೆ ಚೀತಾವನ್ನು ಉಡಗೊರೆಯಾಗಿ ನೀಡಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಬ್ದುಲ್ಲಾ ಹೆಸರಿನ ಚೀತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ವರದಿಯಾಗಿದೆ.

2013ರಲ್ಲಿ ಸೌದಿ ಅರೇಬಿಯಾದ ದೊರೆ ಮೊಹಮ್ಮದ್​ ಅಲ್​ ಸೌದ್ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಹಿಬಾ-ಅಬ್ದುಲ್ಲಾ ಎಂಬ ಗಂಡು ಹಾಗೂ ಹೆಣ್ಣು ಚೀತಾವನ್ನು ನೆನಪಾರ್ಥವಾಗಿ ಜವಾಹರ್​ಲಾಲ್​ ನೆಹರೂ ಮೃಗಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.

ಹಿಬಾ ಹೆಸರಿನ ಹೆಣ್ಣು ಚೀತಾ 2020ರಲ್ಲಿ ಮೃತಪಟ್ಟಿತು.