ಕಡೂರು ತಾಲೂಕು ಆಲಘಟ್ಟ ಸಮೀಪದ ಜಮೀನಿನಲ್ಲಿ ಚಿರತೆ ಮಲಗಿರುವುದು. 
ನ್ಯೂಸ್

ಆಲಘಟ್ಟದಲ್ಲಿ ಬೀಡುಬಿಟ್ಟ ಚಿರತೆ

ಜಿ. ಗಜೇಂದ್ರ

ಕಡೂರು: ಬಳ್ಳೇಕೆರೆ ಸಮೀಪದ ಆಲಘಟ್ಟ ಬಳಿ ಮೂರ್ನಾಲ್ಕು ದಿನಗಳಿಂದ ಚಿರತೆ ಓಡಾಡುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಆಲಘಟ್ಟ ಸಮೀಪದ ಅರಣ್ಯ ಇಲಾಖೆ ನರ್ಸರಿ ಬಳಿ ಚಿರತೆ ಬೀಡುಬಿಟ್ಟಿದ್ದು ಹತ್ತಿರದ ಮಲ್ಲೇಶಪ್ಪ ಎಂಬುವರ ಜಮೀನಿನ ಬಳಿ ಚಿರತೆ ಮಲಗಿರುವುದನ್ನು ಕಂಡ ಕೆಲವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಪ್ರದೇಶದಲ್ಲಿ ನಿರಂತರವಾಗಿ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ಸಾರ್ವಜನಿಕರು ಹೊಲ-ಗದ್ದೆಗಳಿಗೆ ಹೋಗುವಾಗ ಜಾಗರೂಕರಾಗಿರಬೇಕೆಂದು ಪ್ರಕಟಿಸಲು ಪಿಡಿಒಗೆ ಕೋರಿದ್ದೇವೆ. ಚಿರತೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ರಜಾಕ್ ಸಾಬ್ ನದಾಫ್ ತಿಳಿಸಿದ್ದಾರೆ.