ನವದೆಹಲಿ: ವರ್ಷದ ಕೊನೆ ಹಬ್ಬ ದೀಪಾವಳಿ ಒಂದೆಡೆಯಾದರೆ, ಮದುವೆ ಸಮಾರಂಭಗಳ ಸೀಸನ್ ಮತ್ತೊಂದೆಡೆ. ಹೀಗಿರುವಾಗಲೇ ಚಿನ್ನದ ಬೆಲೆಗಳು (Gold Rates) ದಿನದಿಂದ ದಿನಕ್ಕೆ ದಾಖಲೆ ಮಟ್ಟಿಗಿನ ಏರಿಕೆ ಕಾಣುತ್ತಿರುವುದು ಸದ್ಯ ಗೋಲ್ಡ್ ಪ್ರಿಯರನ್ನು ಅಕ್ಷರಶಃ ಕಂಗಾಲಾಗಿಸಿದೆ. ಚಿನ್ನ ಮತ್ತು ಬೆಳ್ಳಿ ದರಗಳು ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗುತ್ತಿರುವುದು ಖರೀದಿದಾರರನ್ನು ಆಭರಣಗಳಿಂದ ದೂರ ಉಳಿಯುವಂತೆ ಮಾಡಿದೆ.
ಭಾರತದಲ್ಲಿ ಇಂದು ಬೆಳಗ್ಗೆ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. 10 ಗ್ರಾಂ 24 ಕ್ಯಾರೆಟ್ ಗೋಲ್ಡ್ ದರ 3,330 ರೂ. ಏರಿಕೆಯಾಗಿ 1,32,770 ರೂ.ಗೆ ತಲುಪಿದೆ. ಇನ್ನು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 3,050 ರೂ. ಜಾಸ್ತಿಯಾಗಿ 1,21,700 ರೂ.ಗೆ ತಲುಪಿದೆ. 18 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ 2,500 ರೂ. ಏರಿಕೆಯಾಗಿ 99,580 ರೂ. ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ
- ಇಂದು ದೆಹಲಿಯಲ್ಲಿ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,32,920 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,21,850 ರೂ. ಆಗಿದೆ.
- ಮುಂಬೈನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,32,770 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,21,700 ರೂ.ಗೆ ಬಂದು ನಿಂತಿದೆ.
- ಬೆಂಗಳೂರಿನಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,32,920 ರೂ.ಗೆ ತಲುಪಿದೆ. ಅದೇ ರೀತಿ, 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 1,21,850 ರೂ.ಗೆ ಬಂದು ನಿಂತಿದೆ.
- ಇನ್ನು ಹೈದರಾಬಾದ್ ಸೇರಿದಂತೆ ತೆಲುಗು ರಾಜ್ಯಗಳಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,32,770 ರೂ.ಗೆ ತಲುಪಿದೆ. ಅದೇ ರೀತಿ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 1,21,700 ರೂ. ಆಗಿದೆ.
ಬೆಳ್ಳಿ ಕೊಂಚ ಇಳಿಕೆ
- ದೆಹಲಿಯಲ್ಲಿ 4000 ರೂ. ಇಳಿಕೆಯೊಂದಿಗೆ ಒಂದು ಕೆಜಿ ಬೆಳ್ಳಿಯ ಬೆಲೆ 1,85,000 ರೂ. ಆಗಿದೆ.
- ಬೆಂಗಳೂರಿನಲ್ಲಿ 100 ರೂ. ಇಳಿಕೆಯೊಂದಿಗೆ ಒಂದು ಕೆಜಿ ಬೆಳ್ಳಿಯ 1,93,900 ರೂ. ಆಗಿದೆ.
- ಇನ್ನು ಚೆನ್ನೈನಲ್ಲಿ 3 ಸಾವಿರ ರೂ. ಕುಸಿತದೊಂದಿಗೆ ಒಂದು ಕೆಜಿ ಬೆಳ್ಳಿಯ ಬೆಲೆ 2,03,000 ರೂ. ಆಗಿದೆ.
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ.