ಕೋಲಾರದ ಬೆಂಗಳೂರು ಉತ್ತರ ವಿವಿಯಿಂದ ಪರೀಕ್ಷೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ದೂರು ನೀಡಲು ಠಾಣೆಗೆ ಬಂದಿರುವುದು. 
ನ್ಯೂಸ್

ಪರೀಕ್ಷೆಗೆ ಅವಕಾಶ ನೀಡದೆ ವಂಚನೆ?

ಕಿರುವಾರ ಎಸ್.ಸುದರ್ಶನ್

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಅಧಿಕಾರಿಗಳು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ನೀಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ, ವಿವಿಯ ಅಧಿಕಾರಿಗಳ ವಿರುದ್ಧ ಕೋಲಾರ ಗ್ರಾಮಾಂತರ ಠಾಣೆ ಪೊಲೀಸರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ.

ಉತ್ತರ ವಿವಿ ವ್ಯಾಪ್ತಿಯ ಮಂಗಸಂದ್ರ ಸ್ನಾತಕೊತ್ತರ ಕೇಂದ್ರದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ದ್ವೀತಿಯ ವರ್ಷದಲ್ಲಿ ಒಟ್ಟು 15 ಮಂದಿ ವ್ಯಾಸಂಗ ಮಾಡುತ್ತಿದ್ದು, ಯಾರಿಗೂ ಪರೀಕ್ಷೆ ಪತ್ರಗಳನ್ನು ನೀಡಿಲ್ಲ, ಆಂತರಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಲಿಪಶು ಮಾಡಲು ಹೊರಟಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಟರನಲ್​ ಅಂಕ ನೀಡಿದ್ದು, ಪರೀೆ ಶುಲ್ಕ ಕಟ್ಟುವಂತೆ ಗ್ರೂಪಿನಲ್ಲಿ ತಿಳಿಸಿದ್ದಾರೆ. ಇದೆಲ್ಲ ಮಾಡಿಯೂ ಈಗ ಹಾಜರಾತಿ ಕಡಿಮೆಯಿದೆ ಎಂದು ನೆಪ ಹೇಳಿ ಪರೀೆಯಿಂದ ವಂಚಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.