ರಾಣೆಬೆನ್ನೂರ: ಶಿಕ್ಷಕರು ಹೇಳುವ ಪಾಠವನ್ನು ಇಷ್ಟಪಟ್ಟು ಕೇಳಬೇಕು. ಅಂದಾಗ ಮಾತ್ರ ವಿದ್ಯಾಥಿರ್ಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಜಿಲ್ಲಾ ಶಿಕ್ಷಣ ಇಲಾಖೆಯ ಹಿರಿಯ ಉಪನ್ಯಾಸಕ ಹಾಗೂ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ ಅಧಿಕಾರಿ ಎಂ.ಎಚ್. ಪಾಟೀಲ ಹೇಳಿದರು.
ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಶನಿವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ವಾಷಿರ್ಕ ಪರೀಕ್ಷೆಯ ಕುರಿತು ಮಕ್ಕಳೊಂದಿಗೆ ಸಂದರ್ಶನ ಹಾಗೂ ಹಾಗೂ ವಿದ್ಯಾಭ್ಯಾಸದ ಕುರಿತು ಚಚಿರ್ಸಿ ಅವರು ಮಾತನಾಡಿದರು.
ಜೀವನದಲ್ಲಿ ಯಶಸ್ಸು ಕಾಣಲು ಶಿಕ್ಷಣದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲ ವಿದ್ಯಾಥಿರ್ಗಳು ಹೆಚ್ಚು ಓದುವುದರಲ್ಲಿ ನಿರತರಾಗಬೇಕು. ಮೊಬೈಲ್ ಹಾಗೂ ಟಿವಿ ನೋಡುವುದನ್ನು ಬಿಟ್ಟು ಅಭ್ಯಾಸದ ಕಡೆ ಗಮನ ಹರಿಸಬೇಕು. ವಾಷಿರ್ಕ ಪರೀಕ್ಷೆಯಲ್ಲಿ ಯಾವುದೆ ಭಯಪಡದೆ ಹಬ್ಬದಂತೆ ಸಂಭ್ರಮಿಸಿ ಪರೀಕ್ಷೆ ಬರೆಯಬೇಕು. ಅತಿ ಹೆಚ್ಚು ಅಂಕಪಡೆದು ತಂದೆ ತಾಯಿ ಹಾಗೂ ಶಿಕ್ಷಕರಿಗೆ ಶಾಲೆಗೆ ಮತ್ತು ಗ್ರಾಮಕ್ಕೆ ಕೀತಿರ್ ತರುವುದರ ಜತೆಗೆ ರಾಜ್ಯದಲ್ಲಿಯೆ ಅತಿ ಹೆಚ್ಚು ಅಂಕಪಡೆಯುವಂತಹ ವಿದ್ಯಾಥಿರ್ಗಳು ನೀವಾಗಬೇಕು ಎಂದರು.
ಮುಖ್ಯಶಿಕ್ಷಕಿ ಮಂಜುಳಾ ಕುಲಕಣಿರ್, ದೈಹಿಕ ಶಿಕ್ಷಕಿ ಸುಧಾ, ಸಹ ಶಿಕ್ಷಕರಾದ ಮಹೇಶ ಹುಣಸಿಕಟ್ಟಿ, ನವೀನ ಅಂಬಿಗೇರ, ಭರಮೇಶ ಹಿರೆಕೇರೂರ, ವಿಜಯ ಪೂಜಾರ, ಬಸವರಾಜ ಬಾಕಿರ್ ಮತ್ತಿತರರಿದ್ದರು.