ತೋಕೂರು ದೇವಸ್ಥಾನದಲ್ಲಿ ದೇವರ ಉತ್ಸವ ಬಲಿ ನಡೆಯಿತು.
- ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನಾ ಮಹೋತ್ಸವ
- ಶಿಬರೂರು ಗೋಪಾಲಕೃಷ್ಣ ತಂತ್ರಿ ಪ್ರಧಾನ ಪೌರೋಹಿತ್ಯ
ಮೂಲ್ಕಿ: ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠಾಪನಾ ಮಹೋತ್ಸವದ ವರ್ಷಾಚರಣೆ ಅಂಗವಾಗಿ ರಾತ್ರಿ ರಂಗ ಪೂಜೆ, ದೇವರ ಉತ್ಸವ ಬಲಿ, ಚಂದ್ರಮಂಡಲ ರಥೋತ್ಸವ ಶಿಬರೂರು ಗೋಪಾಲಕೃಷ್ಣ ತಂತ್ರಿ ಪ್ರಧಾನ ಪೌರೋಹಿತ್ಯದಲ್ಲಿ ನಡೆಯಿತು.
ಕ್ಷೇತ್ರದ ಪ್ರಧಾನ ಅರ್ಚಕ ಟಿ.ಕೆ.ಮಧುಸೂದನ ಆಚಾರ್, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ, ಸದಸ್ಯರಾದ ಪುರುಷೋತ್ತಮ ಕೋಟ್ಯಾನ್, ಅಶೋಕ್ ಕುಂದರ್, ಸಂಪತ್ ಜೆ.ಶೆಟ್ಟಿ ತೋಕೂರುಗುತ್ತು, ವಿಶ್ವನಾಥ, ಭಾಸ್ಕರ್ ದೇವಾಡಿಗ, ಸವಿತಾ ಬೆಳ್ಳಾಯರು, ಶೋಭಾ ವಿ.ಅಂಚನ್, ಪಂಚಾಯಿತಿ ಮಾಜಿ ಅಧ್ಯಕ್ಷ ಮೋಹನ್ ದಾಸ್, ಗ್ರಾಮಸ್ಥರಾದ ಹರಿದಾಸ್ ಭಟ್, ರಾಮಣ್ಣ ದೇವಾಡಿಗ ಮುಂಬೈ, ಪುರುಷೋತ್ತಮ ರಾವ್, ವ್ಯಾಸರಾವ್ ಚೆನ್ನೈ ಉಪಸ್ಥಿತರಿದ್ದರು.