ಬೆಂಗಳೂರು ಉತ್ತರದಲ್ಲಿ ಜಮೀನು ವಿಚಾರಕ್ಕೆ ಮಾರಾಮಾರಿ 
ನ್ಯೂಸ್

ಕಂಟ್ರೋಲ್ ತಪ್ಪಿದ ನಗರಗಿರಿ ಟೌನ್‌ಶಿಪ್ ರಸ್ತೆ ರಂಪಾಟ: ವೃದ್ಧರು, ಮಹಿಳೆಯರ ಮೇಲೆಯೂ ಅಟ್ಯಾಕ್ | Nagargiri Township Controversy

ಖಾಸಗಿ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಾಣ ಪ್ರಶ್ನಿಸಿದ್ದಕ್ಕೆ ಕುಟುಂಬದ ಮೇಲೆ ಹಲ್ಲೆ

ನಗರಿಗಿರಿ ಟೌನ್‌ಶಿಪ್ ಯೋಜನೆಗಾಗಿ ಜೆಸಿಬಿ ಬಳಸಿ ರಸ್ತೆ ನಿರ್ಮಿಸುತ್ತಿದ್ದ ವೇಳೆ ಗಲಾಟೆ

ಮಹಿಳೆಯರು, ವೃದ್ಧರು ಮೇಲೆ ಅಮಾನವೀಯವಾಗಿ ದಾಳಿ ಮಾಡಿದ ಗುಂಪು

ದೂರು ನೀಡಿದರೂ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಸಂತ್ರಸ್ತ ಕುಟುಂಬ ಆಕ್ರೋಶ

Kadasommanahalli land dispute: ಬೆಂಗಳೂರು ಉತ್ತರ ತಾಲೂಕಿನಲ್ಲಿ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಾಣದ ಕಿರಿಕ್ ಭೀಕರ ಹಲ್ಲೆಗೆ ತಿರುಗಿದ್ದು, ಸ್ಥಳದಲ್ಲಿ ತೀವ್ರ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಈ ಗಲಾಟೆಯ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಕಡಸೊಮ್ಮನಹಳ್ಳಿಯಲ್ಲಿ ನಗರಗಿರಿ ಟೌನ್‌ಶಿಪ್‌ಗಾಗಿ ಮಾರುತಿ ಅವರ ಖಾಸಗಿ ಜಮೀನಿನಲ್ಲಿ ಜೆಸಿಬಿ ಮೂಲಕ ದಿಢೀರ್ ರಸ್ತೆ ಕಾಮಗಾರಿ ಆರಂಭಿಸಲಾಗಿತ್ತು. ಇದನ್ನು ಪ್ರಶ್ನಿಸಲು ಹೋದ ಮಾರುತಿ ಹಾಗೂ ಅವರ ಕುಟುಂಬದವರ ಮೇಲೆ ಬಂದಿದ್ದ ಗುಂಪು ಏಕಾಏಕಿ ಭೀಕರ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.

ಮಹಿಳೆಯರು, ವೃದ್ಧರ ಮೇಲೆಯೂ ದೌರ್ಜನ್ಯ

ಯಾವುದೇ ಮುನ್ಸೂಚನೆ ಇಲ್ಲದೆ ಬಂದಿದ್ದ ಗುಂಪು, ಮಾರುತಿ ಕುಟುಂಬದ ಮಹಿಳೆಯರು ಹಾಗೂ ವೃದ್ಧರ ಮೇಲೆಯೂ ರಕ್ತ ಬರುವಂತೆ ಹಲ್ಲೆ ನಡೆಸಿದೆ. ಈ ದಾಳಿಯಲ್ಲಿ ಮೂವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಬೆಂಗಳೂರಿನ ನಿಮ್ಹಾನ್ಸ್ (NIMHANS) ಆಸ್ಪತ್ರೆಗೆ ಸೇರಿಸಲಾಗಿದೆ. ಇಡೀ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.

ಇದನ್ನೂ ಓದಿ: ನನ್ನಂತೆ ಪೂಜಾರಿ ಆಗ್ಬಾರ್ದು ಅಂತ ಸ್ವಂತ ಮಗನನ್ನೇ ಬಲಿ ಕೊಟ್ಟ ತಂದೆ: ಶವದ ಪಕ್ಕದಲ್ಲೇ ಮಲಗಿದ್ದ ನರಾಧಮ!| Father kills son

ಬಾಗಲೂರು ಪೊಲೀಸರ ವಿರುದ್ಧ ಆಕ್ರೋಶ

ಘಟನೆ ನಡೆದು ದೂರು ನೀಡಿದ್ದರೂ ಬಾಗಲೂರು ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಸಂತ್ರಸ್ತ ಕುಟುಂಬ ಕಿಡಿಕಾರಿದೆ. ಅಕ್ರಮವಾಗಿ ಜಮೀನಿಗೆ ನುಗ್ಗಿ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ನ್ಯಾಯ ಒದಗಿಸಬೇಕೆಂದು ಗಾಯಾಳುಗಳ ಕುಟುಂಬಸ್ಥರು ಆಗ್ರಹಿಸಿದ್ದಾರೆ.