ರಾಣೆಬೆನ್ನೂರ: ನೈತಿನ ಮೌಲ್ಯಗಳನ್ನು ಹೊಂದಿರುವ ಭಾರತೀಯ ಸಂಸತಿಯನ್ನು ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು. ವಿಚಾರಗಳಲ್ಲಿ ಆರಂಭಿಸಿ ಆಚಾರಗಳಲ್ಲಿ ಅವುಗಳನ್ನು ಆಚರಣೆಗೆ ತರಬೇಕು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಹೊನ್ನಾಳಿ ಚೆನ್ನಮಲ್ಲಿಕಾರ್ಜುನ ಸ್ವಾಮಿ ಸಂಸತಿ ಪ್ರಸಾರ ಪರಿಷತ್ ವತಿಯಿಂದ ಗುರುವಾರ ರಾತ್ರಿ ನಗರದ ಚೆನ್ನೇಶ್ವರ ಮಠದಲ್ಲಿ ಏರ್ಪಡಿಸಿದ್ದ ಸೀಗೆ ಹುಣ್ಣಿಮೆಯ ಮಾಸಿಕ ಧರ್ಮಸಭೆಯ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮನಸ್ಸನ್ನು ಬುದ್ಧಿಯನ್ನು ಅನ್ಯ ವಿಚಾರಗಳಿಂದ ತುಂಬಿಸಿಕೊಳ್ಳದೆ ಸತ್ಸಂಗ ಸದಾಚಾರಗಳಿಂದ ತುಂಬಿಸಿಕೊಳ್ಳಬೇಕು. ಅತ್ಯಂತ ಕಷ್ಟ ಕಾಲದಲ್ಲಿ ಶ್ರೀ ಪೀಠವನ್ನು ಮುನ್ನಡೆಸಿದ ಹಿರಿಮೆ ಕಾಶಿ ವಿಶ್ವೇಶ್ವರ ಜಗದ್ಗುರು ಹಾಗೂ ವಾಗೀಶ ಪಂಡಿತಾರಾಧ್ಯ ಸ್ವಾಮೀಜಿಗಳದ್ದಾಗಿದೆ ಎಂದರು.
ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ ಸಮಾರಂಭ ಉದ್ಘಾಟಿಸಿದರು. ಕಾಶಿ ವಿಶ್ವೇಶ್ವರ ಜಗದ್ಗುರುಗಳ ಕುರಿತು ನಿವೃತ್ತ ಶಿಕ್ಷಕ ಅಮೃತಗೌಡ ಹಿರೇಮಠ ಉಪನ್ಯಾಸ ನೀಡಿದರು. ಕಲಾವಿದರಾದ ಗುಡ್ಡಪ್ಪ ಹಿಂದಲಮನಿ, ಮೌನೇಶ ತ್ರಾಸದ, ರಜನಿ ಕರಿಗಾರ, ಯುವರಾಜ, ಸೋಮನಾಥ ಹಿರೇಮಠ ಸಂಗೀತ ಪ್ರಸ್ತುತ ಪಡಿಸಿದರು.
ಪ್ರಮುಖರಾದ ಟಿ. ವೀರಣ್ಣ, ವಸಂತಾ ಹುಲ್ಲತ್ತಿ, ಜಗದೀಶ ಮಳೇಮಠ, ಕಸಾಪ ತಾಲೂಕು ಅಧ್ಯಕ್ಷ ಪ್ರಭಾಕರ ಶಿಗ್ಲಿ, ಕಸ್ತೂರೆಮ್ಮ ಪಾಟೀಲ, ಉಮೇಶ ಗುಂಡಗಟ್ಟಿ, ಪ್ರಭುಲಿಂಗಪ್ಪ ಹಲಗೇರಿ, ಮೃತ್ಯುಂಜಯ ಪಾಟೀಲ, ಜ್ಯೋತಿ ಬಣ್ಣದ, ಚನ್ನವಿರಗೌಡ ಪಾಟೀಲ, ಗುಡ್ಡಪ್ಪ ಮಾಳಗುಡ್ಡಪ್ಪನವರ, ಚಂದ್ರಶೇಖರ ಮಡಿವಾಳರ, ಸೋಮನಾಥ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.