ಕೋಲಾರ: ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುವುದಾದರೆ, ಕೇಂದ್ರದಲ್ಲಿ ಮುಂದಿನ 6 ತಿಂಗಳಲ್ಲಿ ಪ್ರಧಾನಿ ಮೋದಿ ಬದಲಾಗುವ ಸಾಧ್ಯತೆಯಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಅಕ್ಟೋಬರ್ ತಿಂಗಳಲ್ಲಿ ಕ್ರಾಂತಿಯಾಗುತ್ತದೆ, ಸಿಎಂ ಸಿದ್ದರಾಮಯ್ಯ ಕೇಳಗೆ ಇಳಿತ್ತಾರೆ ಅಂತ ಬೊಬ್ಬೆ ಹೊಡಿಯುತ್ತಿದ್ದಾರೆ. ಯಾವ ಪಕ್ಷದಲ್ಲಿ ಕ್ರಾಂತಿ ಆಗಲಿದೆ ಎಂಬುದನ್ನು ಕಾದು ನೋಡಲಿ ಎಂದು ತಿಳಿಸಿದರು.
ಧರ್ಮ ಸಂರ್ಷ, ಮುಸ್ಲಿಂ ವಿರುದ್ಧ ಆರೋಪ, ಹಿಂದೂತ್ವ ಮುಂದಿಟ್ಟುಕೊಂಡು ಸುಳ್ಳು ಹೇಳಿಕೆ ನೀಡುವುದು ಬಿಟ್ಟರೆ ಬಿಜೆಪಿ ನಾಯಕರಿಗೆ ಬೇರೆನು ಗೊತ್ತಿಲ್ಲ. ಕಾರ್ಯಕರ್ತರನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿ ಬಡವರನ್ನು ಇಕ್ಕಟ್ಟಿಗೆ ಸಿಕ್ಕಾಕಿಸಿದ್ದಾರೆ. ಎಂದಾದರು ಬಿಜೆಪಿ ನಾಯಕರ ಮಕ್ಕಳು ಪ್ರತಿಭಟನೆಗೆ ಬಂದಿದ್ದಾರೆ ಎಂದು ಪ್ರಶ್ನಿಸಿದರು.
ಮದ್ದೂರು ಗಲಭೆ ಕುರಿತು ಪ್ರತಿಕ್ರಿಯಿಸಿದ ಸಂತೋಷ್ ಲಾಡ್, ದೇವರ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಟನೆ ನಡೆಯಬಾರದಿತ್ತು. ಕಲ್ಲು ತೂರಾಟ ನಡೆಸಿರುವವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಸರ್ಕಾರ ತೆಗೆದುಕೊಳ್ಳುತ್ತದೆ. ಆದರೆ ಬಿಜೆಪಿಯವರು ಇದರಲ್ಲೂ ಹಿಂದೂ&ಮುಸ್ಲಿಂ ರಾಜಕೀಯ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದು ಅತ್ಯುತ್ತಮವಾಗಿ ನಡೆಸಿಕೊಂಡು ಹೋಗುತ್ತಿದೆ. ಆರ್ಥಿಕ ಸ್ಥಿತಿಗತಿಯಲ್ಲೂ ಉತ್ತಮವಾಗಿದೆ. ಆದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಏನಾಗಿದೆ. ಕೆಲ ಕಡೆ ನಮ್ಮನ್ನು ಪಾಲನೆ ಮಾಡಲು ಬಿಜೆಪಿಗೆ ಮುಂದಾಗಿದೆ ವಾಗ್ದಾಳಿ ನಡೆಸಿದರು.
ಭದ್ರಾ ಶಾಸಕ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಕುರಿತು ಪ್ರತಿಕ್ರಿಯಿಸಿ, ಹಿಂದೆ ದೇವೇಗೌಡರು ಸಹ ಇದೇ ಮಾತನ್ನು ಹೇಳಿದ್ದರು, ಭದ್ರಾ ಶಾಸಕರು ಹೇಳಿರೊದರಲ್ಲಿ ತಪ್ಪೇನಿದೆ ಎಂದರು.
ಪಾಕಿಸ್ತಾನಕ್ಕೆ ನೀರು ಬಂದ್ ಮಾಡುತ್ತಾರೆ. ಆದರೆ ಏಷ್ಯಾ ಕಪ್ ಇಂಡಿಯಾ&ಪಾಕಿಸ್ತಾನ ನಡುವೆ ಪಂದ್ಯ ಆಡಿಸಲು ಹೊರಟ್ಟಿದ್ದಾರೆ. ಇದರ ಅವಶ್ಯಕತೆಯೇನಿತ್ತು.?, ಕ್ರೀಡೆ, ಸಿನಿಮಾ ಎಂದರೆ ಅದರದ್ದೆ ದಾಟಿಯಲ್ಲಿ ನೋಡಬೇಕು, ಇಷ್ಟ ಬಂದ ಹಾಗೆ ಮಾಡಿದರೆ ಪ್ರಶ್ನೆ ಮಾಡುವವರು ಯಾರು ಇಲ್ಲ ಅಂತ ವರ್ತಿಸುವುದು ಸರಿಯಲ್ಲ. ಈಗಲು ಗ್ರೇಟೇಸ್ಟ್ ಪ್ರಧಾನಿ ಎಂದು ಸಾಭೀತು ಪಡಿಸಲು ಹೊರಟ್ಟಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ಬಂದಿರೊದು ನರೇಂದ್ರ ಮೋದಿ, ಅಡ್ವಾನಿ ಎಂದು ಛೇಡಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸುಳ್ಳುಗಳು ಹೇಳಿಕೊಂಡು ಅತ್ಯುತ್ತಮ ವ್ಯಕ್ತಿ ಅಂತ ಹೇಳುವುದು ಬಿಟ್ಟರೆ ಬಿಜೆಪಿಯವರಿಗೇ ಬೇರೆನು ಗೊತ್ತಿದೆ. ಕಳೆದ ಅವಧಿಯಲ್ಲಿ ಅವರು ಮಾಡಿರುವ ಸಾಲವನ್ನು ನಮ್ಮ ಸರ್ಕಾರ ತೀರಿಸುತ್ತಿದೆ ಎಂದು ತಿಳಿಸಿದರು.
ಧರ್ಮಸ್ಥಳ ಕ್ಷೇತ್ರಕ್ಕೆ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿ ಮಾತನಾಡಿ, ಹಿಂದುತ್ವ ಮುಂದಿಟ್ಟುಕೊಂಡು ರಾಜಕೀಯ ಮಾಡೊದು ಬಿಟ್ಟರೆ ಬಿಜೆಪಿಗೆ ಇನ್ನೇನು ಗೊತ್ತಿದೆ. ಹಿಂದೂ ಧರ್ಮದ ಬಗ್ಗೆ ಕಾಳಜಿಯಿದ್ದರೆ ಹಿಂದೂ ಸಂಸತಿಯಲ್ಲಿ ಬೇರೆ ಬೇರೆ ಸಮಾಜದವರನ್ನು ಕೀಳಾಗಿ ನೋಡುವುದನ್ನು ಬಿಟ್ಟು ಬದಲಾವಣೆಗೆ ಸಹಕರಿಸಿ ಎಂದು ಕಿವಿಮಾತು ಹೇಳಿದರು.
ಕನ್ನಡಿಗರ ರಕ್ಷಣೆಗೆ ನೇಪಾಳಕ್ಕೆ ಹೋಗಲು ಸಿದ್ಧ
ಮುಖ್ಯಮಂತ್ರಿ ಸೂಚಿಸಿದರೆ ಕನ್ನಡಿಗರ ರಕ್ಷಣೆಗಾಗಿ ನೇಪಾಳಕ್ಕೆ ಹೋಗಲು ಸಿದ್ಧ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.
ನೇಪಾಳದಲ್ಲಿರುವ ಕನ್ನಡಿಗರೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ಸದ್ಯ ಯಾವುದೇ ಸಮಸ್ಯೆ ಇಲ್ಲ. ತಾವು ಎಲ್ಲಿದ್ದೀರೋ ಅಲ್ಲಿ ಸುರಕ್ಷಿತವಾಗಿರಿ ಎಂದಿದ್ದೇನೆ. ಅವರನ್ನು ಕರೆತರುವ ಬಗ್ಗೆ ಮುಖ್ಯಮಂತ್ರಿ ನನಗೆ ಇನ್ನು ಯಾವುದೇ ಸೂಚನೆ ನೀಡಿಲ್ಲ ಎಂದರು.