ನ್ಯೂಸ್

ಮುಂದಿನ ತಿಂಗಳು ಕಾಂಗ್ರೆಸ್‌ನಲ್ಲಿ ಬದಲಾವಣೆ ಪರ್ವ; ಹಳ್ಳಿಯಿಂದ- ದೆಹಲಿವರೆಗೂ ಸರ್ಜರಿ

ಬೆಂಗಳೂರು: 2025ನೇ ಇಸವಿಯನ್ನು ಪಕ್ಷದ ಸಂಘಟನಾ ವರ್ಷ ಎಂದು ೋಷಿಸಿಕೊಂಡಿರುವ ಕಾಂಗ್ರೆಸ್, ೆಬ್ರವರಿಯಲ್ಲಿ ಸಂಘಟನೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಳ್ಳಲು ಬಯಸಿದೆ. ಎಐಸಿಸಿ ಮಟ್ಟದಲ್ಲಿ ಬದಲಾವಣೆ ಮೊದಲಾಗಲಿದೆ. ಅಖಿಲ ಭಾರತ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಆಗಲಿದೆ. ಅದೇ ವೇಳೆ ರಾಜ್ಯದಲ್ಲಿ ಸಣ್ಣ ಮಟ್ಟದ ಸರ್ಜರಿ ನಿರೀಕ್ಷಿಸಲಾಗಿದೆ, ಕೆಪಿಸಿಸಿ ಪದಾಧಿಕಾರಿಗಳ ಪೈಕಿ ನಿಷ್ಕ್ರಿಯರಾದವರಿಗೆ ಕೊನೆಯ ಅವಕಾಶ ನೀಡಿದ್ದು, ಪಕ್ಷದ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸುಧಾರಿಸಿಕೊಳ್ಳುವಂತೆ ನವೆಂಬರ್‌ನಲ್ಲೇ ಸೂಚಿಸಲಾಗಿತ್ತು. ಈ ನಡುವೆ ಪಕ್ಷದ ಜವಾಬ್ದಾರಿಯನ್ನು ಪಡೆದು ಸಂಘಟನೆಯಲ್ಲಿ ತೊಡಗಿಲ್ಲದವರನ್ನು ಗುರುತಿಸುವ ಕೆಲಸ ನಡೆದಿದ್ದು, ಕೆಪಿಸಿಸಿ ಅಧ್ಯಕ್ಷರು ವರದಿ ಕೇಳಿದ್ದರು. ಆ ಪ್ರಕಾರ ಮುಂದಿನ ಹಂತದಲ್ಲಿ ನಿಷ್ಕ್ರಿಯರ ಬದಲು ಹೊಸಬರನ್ನು ಆಯ್ಕೆ ಮಾಡಲಾಗುತ್ತದೆ. ಜಿಲ್ಲೆ, ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳ ಪೈಕಿ ಕೆಲವರು ಪಕ್ಷ ನಿರೀಕ್ಷಿಸಿದಷ್ಟು ತೊಡಗಿಕೊಂಡಿಲ್ಲ ಎಂಬುದು ಕಾರ್ಯಾಧ್ಯಕ್ಷರ ಗಮನಕ್ಕೆ ಬಂದಿದೆ. ಪಕ್ಷದ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳದವರು ಕೆಲವರಾದರೆ, ಪಕ್ಷದ ಸೂಚನೆ ಪಾಲಿಸದೇ ಸುತ್ತಾಡಿಕೊಂಡಿರುವವರು ಕೆಲವರು. ಅಂತವರನ್ನು ಹುಡುಕಿ ಅವರನ್ನು ಬದಲಿಸುವಂತೆ ಎಐಸಿಸಿ ಕೆಪಿಸಿಸಿಗೆ ಸ್ಪಷ್ಟ ಸೂಚನೆ ನೀಡಿದೆ. ಆ ಪ್ರಕಾರ ಬ್ಲಾಕ್, ಪಕ್ಷದ ಪ್ರಮುಖ ಘಟಕಗಳು, ಜಿಲ್ಲಾ ಕಾಂಗ್ರೆಸ್, ವಿಧಾನಸಭಾ ಕ್ಷೇತ್ರ, ಜಿಲ್ಲಾ ಹಾಗೂ ಲೋಕಸಭಾ ಕ್ಷೇತ್ರ ಹಂತಗಳಲ್ಲಿ ಹೊಸ ಸಮಿತಿ ರಚಿಸಬೇಕು ಎಂದು ಸೂಚನೆ ಇದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿದೆ.

  1. ಎಐಸಿಸಿ ಸೂಚನೆ ಏನು? 1. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಪಂಚಾಯಿತಿಯಿಂದ ತಾಲೂಕು, ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಪಕ್ಷ ಬಲವರ್ಧನೆಗೆ ಹೊಸರೂಪ ನೀಡಬೇಕು. 2. ಉದಯಪುರ ಘೋಷಣೆಯಂತೆ ಕಾರ್ಯನಿರ್ವಹಣೆ ಆಗಬೇಕು. ಮಹಿಳೆ, ಯುವ, ಎಸ್ಸಿಎಸ್ಟಿ ಪ್ರಾತಿನಿಧ್ಯಗಳಿಗೆ ಆದ್ಯತೆ ಇರಬೇಕು. 3. ಯಾರಿಗೆ ಯಾವ ಜವಾಬ್ದಾರಿ ನೀಡಲಾಗಿದೆ ಅದನ್ನು ನಿಭಾಯಿಸಬೇಕು. ಯಾರೆಲ್ಲ ತೊಡಗಿಸಿಕೊಳ್ಳುತ್ತಿಲ್ಲವೋ ಅವರಿಗೆ ವಿಶ್ರಾಂತಿ ನೀಡುವುದು. 4. ಪಂಚಾಯಿತಿ, ವಾರ್ಡ್ ಮಟ್ಟದ ಸಮಿತಿ ರಚಿಸಿ ಸಕ್ರಿಯವಾಗಿ ತೊಡಗಿಕೊಳ್ಳಲು ಕಾರ್ಯಕ್ರಮ ಮತ್ತು ಮೇಲುಸ್ತುವಾರಿಗೆ ಕ್ರಮ.

ಅಭಿಪ್ರಾಯ ಸಂಗ್ರಹ

ಬ್ಲಾಕ್ ಘಟಕದ ಅಧ್ಯಕ್ಷರು, ಜಿಲ್ಲಾಧ್ಯಕ್ಷರು ಎಷ್ಟು ವರ್ಷಗಳಿಂದ ಆ ಜವಾಬ್ದಾರಿಯಲ್ಲಿದ್ದಾರೆ, ಈಗಲೂ ಮುಂದುವರಿಯಲು ಬಯಸುತ್ತಾರಾ, ಮುಂದೆಯೂ ಸಮಯ ಕೊಡಲು ಸಿದ್ಧವೇ ಎಂದು ಐವರು ಕಾರ್ಯಾಧ್ಯಕ್ಷರು ತಮ್ಮ ವ್ಯಾಪ್ತಿಯ ಜಿಲ್ಲೆಯಲ್ಲಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಒಂದೊಮ್ಮೆ ಜಿಲ್ಲಾಧ್ಯಕ್ಷರು, ಬ್ಲಾಕ್ ಘಟಕದ ಅಧ್ಯಕ್ಷರು ಬದಲಾವಣೆಗೆ ಒಪ್ಪಿದರೆ ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಿ ಅರ್ಹರನ್ನು ಗುರುತಿಸಿ ಹೆಸರನ್ನು ರಾಜ್ಯ ಘಟಕಕ್ಕೆ ಶಿಾರಸು ಮಾಡುವ ಕೆಲಸ ನಡೆದಿದೆ.

ಅದೇ ರೀತಿ ಪ್ರತಿ ಕಾರ್ಯಾಧ್ಯಕ್ಷರ ಅಧೀನದಲ್ಲಿ 12ರಿಂದ 15 ಪ್ರಧಾನ ಕಾರ್ಯದರ್ಶಿಗಳು ಇರಲಿದ್ದು, ಅವರು ಯಾವ ರೀತಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಕೊಟ್ಟ ಜವಾಬ್ದಾರಿ ನಿಭಾಯಿಸುತ್ತಿದ್ದಾರೆಯೇ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಕಾರ್ಯಾಧ್ಯಕ್ಷರು ವರದಿ ನೀಡಿದ್ದಾರೆ. ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ.